ಮಹಿಳಾ ಪ್ರೀಮಿಯರ್ ಲೀಗ್ ಲಾಂಛನ
ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯಪಿಎಲ್) ಕ್ರಿಕೆಟ್‌ಗೆ ಈ ಬಾರಿ 165 ಆಟಗಾರ್ತಿಯರು ಬಿಡ್‌ಗೆ ಒಳಗಾಗಲಿದ್ದು, ಡಿಸೆಂಬರ್ 9ರಂದು ಇಲ್ಲಿ ಬಿಡ್ಡಿಂಗ್ ನಡೆಯಲಿದೆ. ಮುಂದಿನ ಫೆಬ್ರುವರಿ ಮಾರ್ಚ್ ತಿಂಗಳಲ್ಲಿ ಡಬ್ಲ್ಯುಪಿಎಲ್ ನಡೆಯಲಿದೆ.
‘165 ಆಟಗಾರ್ತಿಯರ ಪೈಕಿ 104 ಮಂದಿ ಭಾರತದ ಆಟಗಾರ್ತಿಯರು. 61 ವಿದೇಶ ಆಟಗಾರ್ತಿಯರು. ಇವ ರಲ್ಲಿ ಈಗಾಗಲೇ 56 ಆಟಗಾರ್ತಿಯರು ರಾಷ್ಟ್ರೀಯ ತಂಡಕ್ಕೆ ಆಡಿದ್ದಾರೆ’ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ. ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್, ಗುಜರಾತ್ ಜೈಂಟ್ಸ್, ಯುಪಿ ವಾರಿಯರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ತಂಡಗಳಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.