ಪಂದ್ಯದ ಆಟಗಾರ್ತಿ ಗೌರವ ಪಡೆದ ಗೋಂಗಡಿ ತ್ರಿಷಾ
–ಎಕ್ಸ್ ಚಿತ್ರ
ಕ್ವಾಲಾಲಂಪುರ: ಆರಂಭ ಆಟಗಾರ್ತಿ ಗೋಂಗಡಿ ತ್ರಿಷಾ (ಔಟಾಗದೇ 58, 46ಎ, 4x10) ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ, ಮಹಿಳಾ 19 ವರ್ಷದೊಳಗಿನವರ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿ ‘ಸೂಪರ್ ಫೋರ್’ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ಮೇಲೆ ಗುರುವಾರ ಎಂಟು ವಿಕೆಟ್‌ಗಳ ಸುಲಭ ಗೆಲುವನ್ನು ಸಾಧಿಸಿತು.
ಮೊದಲು ಬ್ಯಾಟಿಂಗಿಗೆ ಕಳುಹಿಸಲ್ಪಟ್ಟ ಬಾಂಗ್ಲಾ ಯುವತಿಯರ ತಂಡ 8 ವಿಕೆಟ್‌ಗೆ 80 ರನ್ ಗಳಿಸಲಷ್ಟೇ ಶಕ್ತವಾಯಿತು. ಉತ್ತರವಾಗಿ ಭಾರತ 12.1 ಓವರುಗಳಲ್ಲಿ 2 ವಿಕೆಟ್‌ಗೆ 86 ರನ್ ಹೊಡೆಯಿತು. ಜಿ.ಕಮಲಿನಿ (0) ಮತ್ತು ಸಾನಿಕಾ ಚಾಲ್ಕೆ (1) ಬೇಗ ನಿರ್ಗಮಿಸಿದರೂ, ತ್ರಿಷಾ ಮತ್ತು ನಿಕಿ ಪ್ರಸಾದ್ (ಅಜೇಯ 22) ಅವರು ಮುರಿಯದ ಮೂರನೇ ವಿಕೆಟ್‌ಗೆ 64 ರನ್ ಸೇರಿಸಿ ಸುಲಭ ಗೆಲುವಿಗೆ ನೆರವಾದರು. ಇದಕ್ಕೆ ಮೊದಲು ಎಡಗೈ ಸ್ಪಿನ್ನರ್‌ಗಳಾದ ಆಯುಷಿ ಶುಕ್ಲಾ ಮತ್ತು ಸೋನಮ್ ಯಾದವ್ ಐದು ವಿಕೆಟ್‌ಗಳನ್ನು ಹಂಚಿಕೊಂಡು ಬಾಂಗ್ಲಾ ತಂಡದ ಕುಸಿತಕ್ಕೆ ಕಾರಣರಾದರು.ಸೂಪರ್ ಫೋರ್‌ನಲ್ಲಿ ಭಾರತ ಐದು ಪಾಯಿಂಟ್ ಗಳಿಸಿ ಅಗ್ರಸ್ಥಾನದಲ್ಲಿದೆ.
ಸಂಕ್ಷಿಪ್ತ ಸ್ಕೋರು
ಬಾಂಗ್ಲಾದೇಶ: 20 ಓವರುಗಳಲ್ಲಿ 8 ವಿಕೆಟ್‌ಗೆ 80 (ಮೊಸಾಮತ್ ಇವಾ 14; ಆಯುಷಿ ಶುಕ್ಲಾ 9ಕ್ಕೆ3, ಸೋನಮ್ ಯಾದವ್ 6ಕ್ಕೆ2);
ಭಾರತ: 12.1 ಓವರುಗಳಲ್ಲಿ 2 ವಿಕೆಟ್‌ಗೆ 86 (ಜಿ.ತ್ರಿಷಾ ಔಟಾಗದೇ 58, ನಿಕಿ ಪ್ರಸಾದ್ ಔಟಾಗದೇ 22).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.