ನವದೆಹಲಿಯಲ್ಲಿ ಶುಕ್ರವಾರ ನಡೆದ ಡಬ್ಲ್ಯುಪಿಎಲ್ ಪಂದ್ಯದಲ್ಲಿ ಯು.ಪಿ. ವಾರಿಯರ್ಸ್ ತಂಡದ ಬ್ಯಾಟರ್ ದೀಪ್ತಿ ಶರ್ಮಾ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ ತಿತಾಸ್ ಸಾಧು –
ಪಿಟಿಐ ಚಿತ್ರ
ನವದೆಹಲಿ : ಪಂದ್ಯದ ಕೊನೆ ಯ ಓವರ್‌ನಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಯು.ಪಿ. ವಾರಿಯರ್ಸ್ ಎದುರು ಜಯಿಸುವ ಅವಕಾಶವನ್ನೂ ಕೈಚೆಲ್ಲಿತು.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವಾರಿಯರ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 138 ರನ್ ಗಳಿಸಿತ್ತು. ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ್ದ ಡೆಲ್ಲಿ ತಂಡಕ್ಕೆ ಕೊನೆಯ ಓವರ್‌ನಲ್ಲಿ ಕೇವಲ 10 ರನ್‌ಗಳ ಅಗತ್ಯವಿತ್ತು. ಆದರೆ, ನಾಟಕೀಯ ತಿರುವುಗಳನ್ನು ಕಂಡ ಈ ಓವರ್‌ನಲ್ಲಿ ಡೆಲ್ಲಿ ಸೋತಿತು.
ವಾರಿಯರ್ಸ್ 1 ರನ್ ಅಂತರದ ರೋಚಕ ಜಯ ಗಳಿಸಿತು. ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ದೀಪ್ತಿ ಶರ್ಮಾ (59; 48ಎ, 4X6, 6X1) ನಾಲ್ಕು ವಿಕೆಟ್ ಗಳಿಸಿ ಬೌಲಿಂಗ್‌ನಲ್ಲಿಯೂ ಮೆರೆದರು. ಅದರಲ್ಲೂ ಅವರು ಇನಿಂಗ್ಸ್‌ನ ಕೊನೆಯ ಓವರ್ ಬೌಲಿಂಗ್ ಮಾಡಿ ಎರಡು ವಿಕೆಟ್ ಗಳಿಸಿದರೆ, ಇದೇ ಓವರ್‌ನಲ್ಲಿ ಜೆಸ್ ಯಾನ್ಸೆನ್ ಅವರನ್ನು ರನ್‌ಔಟ್ ಮಾಡಿದ ರಾಜೇಶ್ವರಿ ಗಾಯಕವಾಡ್ ಮತ್ತು ವಿಕೆಟ್‌ಕೀಪರ್ ಹೀಲಿ ಅವರು ತಮ್ಮ ತಂಡಕ್ಕೆ ಗೆಲುವಿನ ಅವಕಾಶ ಮಾಡಿಕೊಟ್ಟರು.
ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಮೆಗ್‌ಲ್ಯಾನಿಂಗ್ (60; 46ಎ, 4X12) ಉತ್ತಮ ಆರಂಭ ನೀಡಿದ್ದರು. ಆದರೆ ಉಳಿದ ಬ್ಯಾಟರ್‌ಗಳ ರನ್ ಗಳಿಕೆ ನಿಧಾನಗತಿಯಲ್ಲಿತ್ತು. ಆದರೂ 17 ಓವರ್
ಗಳಲ್ಲಿ ತಂಡವು 4 ವಿಕೆಟ್‌ಗಳಿಗೆ 112 ರನ್ ಗಳಿಸಿತ್ತು. ನಂತರದ 3 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡ ಡೆಲ್ಲಿ ಸೋಲಿನ ಕಹಿ ಅನುಭವಿಸಿತು.
ಇದರಿಂದಾಗಿ ತಿತಾಸ್ ಸಾಧು (23ಕ್ಕೆ2) ಮತ್ತು ರಾಧಾ ಯಾದವ್ (16ಕ್ಕೆ2) ಅವರು ಬೌಲಿಂಗ್‌ನಲ್ಲಿ ಮಾಡಿದ ಶ್ರಮ ವ್ಯರ್ಥವಾಯಿತು.
ಸಂಕ್ಷಿಪ್ತ ಸ್ಕೋರು: ಯು.ಪಿ. ವಾರಿಯರ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 138 (ಎಲಿಸಾ ಹೀಲಿ 29, ದೀಪ್ತಿ ಶರ್ಮಾ 59, ತಿತಾಸ್ ಸಾಧು 23ಕ್ಕೆ2, ರಾಧಾ ಯಾದವ್ 16ಕ್ಕೆ2) ಡೆಲ್ಲಿ ಕ್ಯಾಪಿಟಲ್ಸ್: 19.5 ಓವರ್‌ಗಳಲ್ಲಿ 137 (ಮೆಗ್ ಲ್ಯಾನಿಂಗ್ 60, ಶಫಾಲಿ ವರ್ಮಾ 15, ಅಲೈಸ್ ಕ್ಯಾಪ್ಸಿ 15, ಜೆಮಿಮಾ ರಾಡ್ರಿಗಸ್ 17, ಸೈಮಾ ಠಾಕೂರ್ 30ಕ್ಕೆ2, ದೀಪ್ತಿ ಶರ್ಮಾ 19ಕ್ಕೆ4, ಗ್ರೇಸ್ ಹ್ಯಾರಿಸ್ 8ಕ್ಕೆ2)
ಫಲಿತಾಂಶ: ಯು.ಪಿ. ವಾರಿಯರ್ಸ್ ತಂಡಕ್ಕೆ 1 ರನ್ ಜಯ. ಪಂದ್ಯದ ಆಟಗಾರ್ತಿ: ದೀಪ್ತಿ ಶರ್ಮಾ
ಇಂದಿನ ಪಂದ್ಯ
ಗುಜರಾತ್ ಜೈಂಟ್ಸ್– ಮುಂಬೈ ಇಂಡಿಯನ್ಸ್ (ರಾತ್ರಿ 7.30)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.