ADVERTISEMENT

ಮಹಿಳಾ ಪ್ರೀಮಿಯರ್ ಲೀಗ್: ಬಿಡ್‌ನಲ್ಲಿ 409 ಆಟಗಾರ್ತಿಯರು

ಪಿಟಿಐ
Published 7 ಫೆಬ್ರುವರಿ 2023, 16:50 IST
Last Updated 7 ಫೆಬ್ರುವರಿ 2023, 16:50 IST
   

ಮುಂಬೈ: ಮುಂದಿನ ತಿಂಗಳು ನಡೆಯಲಿರುವ ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ತಂಡಗಳಿಗೆ ಆಯ್ಕೆಗಾಗಿ ನಡೆಯಲಿರುವ ಬಿಡ್‌ನಲ್ಲಿ 409 ಆಟಗಾರ್ತಿಯರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ಇದೇ 13ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. ಇದರಲ್ಲಿ ಪ್ರಮುಖ ಆಟಗಾರ್ತಿಯರಾದ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂದಾನ, ಅಲೈಸಾ ಹೀಲಿ ಹಾಗೂ ಸೋಫಿ ಎಕ್ಸೆಲ್‌ಸ್ಟೋನ್ ಸೇರಿದಂತೆ 24 ಆಟಗಾರ್ತಿಯರಿಗೆ ತಲಾ ₹ 50 ಲಕ್ಷ ಮೂಲಬೆಲೆ ನಿಗದಿ ಮಾಡಲಾಗಿದೆ. 30 ಆಟಗಾರ್ತಿಯರಿಗೆ ತಲಾ ₹ 40 ಲಕ್ಷ ಮೂಲಬೆಲೆ ಇದೆ.

ಒಟ್ಟು ಐದು ಫ್ರ್ಯಾಂಚೈಸಿಗಳು ಸೇರಿ ಗರಿಷ್ಠ 90 ಆಟಗಾರ್ತಿಯರನ್ನು ಖರೀದಿಸಲಿವೆ. ಇದರಲ್ಲಿ 30 ಸ್ಥಾನಗಳು ವಿದೇಶಿ ಆಟಗಾರ್ತಿಯರಿಗೆ ಮೀಸಲಿವೆ. 246 ಭಾರತೀಯ ಆಟಗಾರ್ತಿಯರು ಹಾಗೂ 163 ವಿದೇಶಿ ಆಟಗಾರ್ತಿಯರು ಕಣದಲ್ಲಿದ್ದಾರೆ.

ADVERTISEMENT

ಪ್ರತಿ ತಂಡವು ₹ 12 ಕೋಟಿ ಪರ್ಸ್ ಸಾಮರ್ಥ್ಯ ಹೊಂದಿದೆ.

ಮಾರ್ಚ್ 4 ರಿಂದ 26ರವರೆಗೆ ಡಬ್ಲ್ಯುಪಿಎಲ್ ನಡೆಯಲಿದೆ. ಇದೇ ಮೊದಲ ಬಾರಿಗೆ ಟೂರ್ನಿ ಆಯೋಜಿಸಲಾಗಿದೆ. ಒಟ್ಟು 22 ಪಂದ್ಯಗಳು ನಡೆಯಲಿವೆ ಎಂದು ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್ ಸೋಮವಾರ ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.