ADVERTISEMENT

WPLನ ಮೊದಲ ಶತಕ ಸಿಡಿಸಿದ ನ್ಯಾಟ್ ಸಿವರ್-ಬ್ರಂಟ್: ಆರ್‌ಸಿಬಿಗೆ 200 ರನ್ ಗುರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜನವರಿ 2026, 13:37 IST
Last Updated 26 ಜನವರಿ 2026, 13:37 IST
   

ವಡೋದರ: ಮಹಿಳಾ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಲ್‌)ನ ಟೂರ್ನಿಯ ಇತಿಹಾಸದಲ್ಲೇ ಮೊದಲ ಶತಕ ದಾಖಲಾಗಿದೆ. ಮುಂಬೈ ಇಂಡಿಯನ್ಸ್ ತಂಡದ ನ್ಯಾಟ್ ಸಿವರ್-ಬ್ರಂಟ್ ಈ ದಾಖಲೆ ಬರೆದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು, ನ್ಯಾಟ್ ಸಿವರ್-ಬ್ರಂಟ್ ಶತಕದ ನೆರವಿನಿಂದ 20 ಓವರ್‌ಗಳ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 199 ರನ್‌ ಗಳಿಸಿತು. ಆರ್‌ಸಿಬಿ ತಂಡಕ್ಕೆ 200 ರನ್ ಗುರಿ ನೀಡಿದೆ.

ಮುಂಬೈ ಇಂಡಿಯನ್ಸ್ ಪರ ಆರಂಭಿಕ ಆಟಗಾರ್ತಿ ಹೇಲಿ ಮ್ಯಾಥ್ಯೂಸ್ (56 ರನ್; 39 ಎಸೆತ) ಉತ್ತಮ ಆಟವಾಡಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ನ್ಯಾಟ್ ಸಿವರ್-ಬ್ರಂಟ್ ಅವರು ಕೇವಲ 57 ಎಸೆತಗಳಲ್ಲಿ 16 ಬೌಂಡರಿ, 1 ಸಿಕ್ಸರ್ ಸಹಿತ 100 ರನ್ ಗಳಿಸಿ ಅಜೇಯರಾಗಿ ಉಳಿದರು. ಟೂರ್ನಿಯಲ್ಲಿ ದಾಖಲಾದ ಮೊದಲ ಶತಕ ಇದಾಗಿದೆ.

ADVERTISEMENT

ಆರ್‌ಸಿಬಿ ಪರ ಲಾರೆನ್ ಬೆಲ್ 2 ವಿಕೆಟ್, ಶ್ರೇಯಾಂಕಾ ಪಾಟೀಲ್ ಮತ್ತು ನಾಡಿನ್ ಡಿ ಕ್ಲರ್ಕ್ ತಲಾ 1 ವಿಕೆಟ್ ಪಡೆದರು.‌

ಕಳೆದ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟರ್‌ಗಳು ರನ್‌ ಗಳಿಸಲು ಪರದಾಡಿದ್ದರೆ, ಮುಂಬೈ ವಿರುದ್ಧ ಬೌಲರ್‌ಗಳು ರನ್‌ ನಿಯಂತ್ರಿಸಲು ಒಡ್ಡಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.