ಫುಟ್‌ಬಾಲ್
ಬೆಂಗಳೂರು: ಕೊನೆಯ ಹಂತದಲ್ಲಿ ಸಚಿನ್ ಗುಡ್ಡದ ಯಲ್ಲಪ್ಪವರ ಗಳಿಸಿದ ಗೋಲಿನ ನೆರವಿನಿಂದ ಡಿವೈಇಎಸ್ ಫುಟ್‌ಬಾಲ್ ಕ್ಲಬ್ ತಂಡವು ಬಿಡಿಎಫ್‌ಎ ‘ಎ’ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 1–0ಯಿಂದ ಬ್ಲಿಟ್ಜ್ ಎಫ್.ಸಿ ತಂಡವನ್ನು ಮಣಿಸಿತು.
ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಸಚಿನ್ 80ನೇ ನಿಮಿಷದಲ್ಲಿ ಗೆಲುವಿನ ಗೋಲು ದಾಖಲಿಸಿದರು.
ದಿನದ ಮತ್ತೊಂದು ಪಂದ್ಯದಲ್ಲಿ ಆದಾಯ ತೆರಿಗೆ ಎಫ್‌ಸಿ ತಂಡವು 2–1 ಗೋಲುಗಳಿಂದ ಸ್ನೈಪರ್ಸ್ ಎಫ್‌ಸಿ ತಂಡವನ್ನು ಸೋಲಿಸಿತು. ಆದಾಯ ತೆರಿಗೆ ತಂಡದ ಪರ ಪದ್ಯಾನ್ ಎಂ (8ನೇ ನಿಮಿಷ) ಮತ್ತು ಪ್ರಶಾಂತ್ ಕಳಿಂಗ್ (40+2ನೇ) ಗೋಲು ಗಳಿಸಿದರು. ನಿಕೇಶ್ ಟಿ. (5ನೇ) ಸ್ನೈಪರ್ಸ್ ಪರ ಚೆಂಡನ್ನು ಗುರಿ ಸೇರಿಸಿದರು.
ಪಾಸ್ ಎಫ್‌ಸಿ ತಂಡಕ್ಕೆ ಗೆಲುವು:
ಇದೇ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಬಿ ಡಿವಿಷನ್ ಲೀಗ್‌ನ ಪಂದ್ಯದಲ್ಲಿ ಪಾಸ್ ಎಫ್‌ಸಿ ತಂಡವು 10–1 ಗೋಲುಗಳಿಂದ ವುಮೆನ್ಸ್ ಕ್ಲಬ್ ತಂಡವನ್ನು ಮಣಿಸಿತು. ಸೌಮ್ಯಾ ಕೆ. ಆರು ಗೋಲು ದಾಖಲಿಸಿದರು.
ಇತರ ಪಂದ್ಯಗಳಲ್ಲಿ ಎಫ್‌ಸಿ ಡೆಕ್ಕನ್ 1–0ಯಿಂದ ಗೆದ್ದರೆ, ಸ್ಪೋರ್ಟ್ಸ್‌ಹುಡ್ ತಂಡವು 1–1 ಗೋಲುಗಳಿಂದ ಗೋಲ್ ಎಫ್‌ಸಿ ತಂಡದೊಂದಿಗೆ ಡ್ರಾ ಸಾಧಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.