ಫುಟ್‌ಬಾಲ್
ನವದೆಹಲಿ: ಭಾರತದ ಫುಟ್‌ಬಾಲ್‌ನಲ್ಲಿ ಅಗ್ರ ಸ್ಥರದ ಲೀಗ್‌ಅನ್ನು ಇನ್ನು ಮುಂದೆ ಖಾಸಗಿಯವರು ವಹಿಸುವಂತಿಲ್ಲ. ಸುಪ್ರೀಂ ಕೋರ್ಟ್ ಸಮ್ಮತಿಸಿರುವ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ (ಎಐಎಫ್‌ಎಫ್) ಹೊಸ ನಿಯಮಾವಳಿಯ ಪ್ರಕಾರ ಈ ಲೀಗ್‌ನ ಮಾಲೀಕತ್ವ ಫೆಡರೇಷನ್ ಕೈಯ್ಯಲೇ ಇರಲಿದೆ.
ರಿಲಯನ್ಸ್‌ನ ಅಧೀನಸಂಸ್ಥೆಯಾದ ಫುಟ್‌ಬಾಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಲಿಮಿಟೆಡ್ (ಎಫ್‌ಎಸ್‌ಡಿಎಲ್) 2014ರಿಂದ ದೇಶಿ ಫುಟ್‌ಬಾಲ್‌ನ ಅಗ್ರಸ್ಥರದ ಲೀಗ್ ಆಗಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಮಾಲೀಕತ್ವ ಮತ್ತು ನಿರ್ವಹಣೆ ಹೊಂದಿತ್ತು.
ಲೀಗ್‌ನ ಮಾಲೀಕತ್ವ ಮತ್ತು ನಿರ್ವಹಣೆಯನ್ನು ಇನ್ನು ಎಐಎಫ್‌ಎಫ್ ವಹಿಸಿಕೊಳ್ಳಲಿದೆ. ಹೊಸ ನಿಯಮಾವಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಅಂಗೀಕಾರದ ಮುದ್ರೆ ಒತ್ತಿದೆ.
ಪರಿಷ್ಕೃತ ನಿಯಮಾವಳಿಯ ಪ್ರಕಾರ ಅಗ್ರ ಲೀಗ್‌ನಲ್ಲಿ ಬಡ್ತಿ ಮತ್ತು ಹಿಂಬಡ್ತಿ (ಪ್ರಮೋಷನ್– ರೆಲಿಗೇಷನ್) ಇರಲಿದೆ.
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ಅವರು ಸಿದ್ಧಪಡಿಸಿರುವ ಎಐಎಫ್‌ಎಫ್‌ನ ಹೊಸ ಕರಡಿಗೆ ಕೆಲವು ಮಾರ್ಪಾಡುಗಳೊಂದಿಗೆ ಸಮ್ಮತಿ ನೀಡಿರುವ ನ್ಯಾಯಾಲಯವು, ನಾಲ್ಕು ವಾರಗಳ ಒಳಗಾಗಿ ಸರ್ವಸದಸ್ಯರ ಸಭೆಯಲ್ಲಿ ಇದನ್ನು ಅಂಗೀಕರಿಸುವಂತೆ ನಿರ್ದೇಶನ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.