ಫುಟ್‌ಬಾಲ್
ಮಡಗಾಂವ್: ಭಾರತ ಪುರುಷರ ಫುಟ್‌ಬಾಲ್ ತಂಡವು ಮಂಗಳವಾರ 1–2 ಗೋಲುಗಳಿಂದ ಸಿಂಗಪುರ ತಂಡಕ್ಕೆ ಮಣಿಯಿತು. ಈ ಮೂಲಕ ಎಎಫ್‌ಸಿ ಏಷ್ಯನ್ ಕಪ್ 2027ರ ಪ್ರಧಾನ ಟೂರ್ನಿಯಲ್ಲಿ ಆಡುವ ಭಾರತ ತಂಡದ ಕನಸು ಭಗ್ನಗೊಂಡಿತು.
ಕೊರಿಯಾ ಮೂಲದ ಮಿಡ್‌ಫೀಲ್ಡರ್ ಸಾಂಗ್ ಉಯಿ ಯಂಗ್ ಗಳಿಸಿದ ಎರಡು ಗೋಲುಗಳ ನೆರವಿನಿಂದ ಸಿಂಗಪುರ ತಂಡವು ರೋಚಕ ಹಣಾಹಣಿಯಲ್ಲಿ ಜಯಭೇರಿ ಬಾರಿಸಿತು.
ಅ.9ರಂದು ಸಿಂಗಪುರದಲ್ಲಿ ನಡೆದ ಮೊದಲ ಲೆಗ್‌ನ ಪಂದ್ಯ 1-1ರಿಂದ ಡ್ರಾ ಆಗಿತ್ತು. ಇಲ್ಲಿನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆದ ರಿಟರ್ನ್ ಲೆಗ್‌ನ ಪಂದ್ಯದಲ್ಲಿ ಲಲಿಯನ್ಜುವಾಲಾ ಛಾಂಗ್ಟೆ 14ನೇ ನಿಮಿಷದಲ್ಲಿ ಭಾರತ ತಂಡಕ್ಕೆ ಮುನ್ನಡೆ ಒದಗಿಸಿದ್ದರು.
ಆದರೆ, 44ನೇ ನಿಮಿಷದಲ್ಲಿ ಸಾಂಗ್ ಗೋಲು ಹೊಡೆದಿದ್ದರಿಂದ ಮಧ್ಯಂತರದ ವೇಳೆ ಉಭಯ ತಂಡಗಳ ಸ್ಕೋರ್ 1–1 ಸಮಬಲಗೊಂಡಿತು. ಆದರೆ, 58ನೇ ನಿಮಿಷದಲ್ಲಿ ಸಾಂಗ್ ನಿರ್ಣಾಯಕ ಗೋಲು ದಾಖಲಿಸಿ ಭಾರತಕ್ಕೆ ಆಘಾತ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.