ADVERTISEMENT

ಎಟಿಕೆಎಂಬಿ ಸೇರಿದ ಲಿಸ್ಟನ್ ಕೊಲ್ಯಾಕೊಗೆ ದಾಖಲೆ ಮೊತ್ತ

ಪಿಟಿಐ
Published 10 ಏಪ್ರಿಲ್ 2021, 14:01 IST
Last Updated 10 ಏಪ್ರಿಲ್ 2021, 14:01 IST
ಲಿಸ್ಟನ್ ಕೊಲ್ಯಾಕೊ (ಬಲಬದಿ) –ಐಎಸ್‌ಎಲ್ ಮೀಡಿಯಾ ಚಿತ್ರ
ಲಿಸ್ಟನ್ ಕೊಲ್ಯಾಕೊ (ಬಲಬದಿ) –ಐಎಸ್‌ಎಲ್ ಮೀಡಿಯಾ ಚಿತ್ರ   

ಹೈದರಾಬಾದ್: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಆಡುವ ಎಟಿಕೆ ಮೋಹನ್ ಬಾಗನ್ ತಂಡ ಫಾರ್ವರ್ಡ್‌ ಆಟಗಾರ ಲಿಸ್ಟನ್ ಕೊಲ್ಯಾಕೊ ಅವರನ್ನು ದಾಖಲೆ ಮೊತ್ತ ನೀಡಿ ಬರಮಾಡಿಕೊಂಡಿದೆ. ಅವರು ಈ ವರೆಗೆ ಹೈದರಾಬಾದ್ ಎಫ್‌ಸಿಯಲ್ಲಿ ಆಡುತ್ತಿದ್ದರು.

ಕೊಲ್ಯಾಕೊ ಅವರನ್ನು ಎಟಿಕೆ ಮೋಹನ್‌ ಬಾಗನ್‌ಗೆ ಬಿಟ್ಟುಕೊಡಲು ಹೈದರಾಬಾದ್ ಎಫ್‌ಸಿ ಒಪ್ಪಿಕೊಂಡಿದೆ. ಆದರೆ ಈ ವರ್ಗಾವಣೆಗಾಗಿ ನಿಗದಿ ಮಾಡಿರುವ ಮೊತ್ತ ಎಷ್ಟು ಎಂಬುದನ್ನು ಬಹಿರಂಗಪಡಿಸಿಲ್ಲ. 22 ವರ್ಷದ ಈ ಆಟಗಾರ ಜೂನ್ ಒಂದರಂದು ಎಟಿಕೆ ಸೇರಲಿದ್ದಾರೆ.

‘ಸುದೀರ್ಘ ಕಾಲದ ಸುಸ್ಥಿರತೆಯನ್ನು ಗಮನದಲ್ಲಿರಿಸಿಕೊಂಡು ಲಿಸ್ಟನ್ ಅವರನ್ನು ಬಿಟ್ಟುಕೊಡಲು ನಿರ್ಧರಿಸಿದ್ದೇವೆ. ಐಎಸ್‌ಎಲ್‌ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಅವರನ್ನು ಎಟಿಕೆಎಂಬಿ ಪಡೆದುಕೊಂಡಿದೆ’ ಎಂದು ಹೈದರಾಬಾದ್ ಎಫ್‌ಸಿ ಫ್ರಾಂಚೈಸ್ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

2020ರ ಜನವರಿಯಲ್ಲಿ ಲಿಸ್ಟನ್ ಅವರು ಹೈದರಾಬಾದ್ ಎಫ್‌ಸಿ ಸೇರಿದ್ದರು. ಈ ವರೆಗೆ ಒಟ್ಟು 23 ಪಂದ್ಯಗಳನ್ನು ಆಡಿದ್ದು ನಾಲ್ಕು ಗೋಲು ಗಳಿಸಿದ್ದಾರೆ. ಮೂರು ಗೋಲುಗಳಿಗೆ ಅವಕಾಶವನ್ನೂ ಮಾಡಿಕೊಟ್ಟಿದ್ದಾರೆ. ರಾಷ್ಟ್ರೀಯ ತಂಡಕ್ಕೂ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.