ADVERTISEMENT

ನಿರಾಶ್ರಿತ ಫುಟ್‌ಬಾಲಿಗನಿಗೆ ಆಸ್ಟ್ರೇಲಿಯಾ ನೆರವು

ರಾಯಿಟರ್ಸ್
Published 5 ಫೆಬ್ರುವರಿ 2019, 17:29 IST
Last Updated 5 ಫೆಬ್ರುವರಿ 2019, 17:29 IST
ಕಾಲಿಗೆ ಸಂಕೋಲೆ ತೊಡಿಸಿ ಥಾಯ್ಲೆಂಡ್ ಕೋರ್ಟ್‌ನಿಂದ ಹಕೀಮ್ ಅವರನ್ನು ಕರೆದುಕೊಂಡು ಹೋಗುತ್ತಿರುವ ಪೊಲೀಸರು –ರಾಯಿಟರ್ಸ್ ಚಿತ್ರ
ಕಾಲಿಗೆ ಸಂಕೋಲೆ ತೊಡಿಸಿ ಥಾಯ್ಲೆಂಡ್ ಕೋರ್ಟ್‌ನಿಂದ ಹಕೀಮ್ ಅವರನ್ನು ಕರೆದುಕೊಂಡು ಹೋಗುತ್ತಿರುವ ಪೊಲೀಸರು –ರಾಯಿಟರ್ಸ್ ಚಿತ್ರ   

ಸಿಡ್ನಿ: ಬಹರೇನ್‌ನ ನಿರಾಶ್ರಿತ ಫುಟ್‌ಬಾಲ್ ಆಟಗಾರ ಹಕೀಮ್‌ ಅಲ್‌ ಅರೇಬಿ ಅವರಿಗೆ ನೆರವು ನೀಡಲು ಆಸ್ಟ್ರೇಲಿಯಾ ಫುಟ್‌ಬಾಲ್ ಫೆಡರೇಷನ್ ಮುಂದಾಗಿದೆ. ಇದಕ್ಕಾಗಿ ಭಾರಿ ಮೊತ್ತವನ್ನು ವ್ಯಯಿಸುವುದಾಗಿ ತಿಳಿಸಿದೆ.

ಪೊಲೀಸ್‌ ಠಾಣೆಯೊಂದನ್ನು ಪುಡಿಗಟ್ಟಿದ ಪ್ರಕರಣದಲ್ಲಿ ಬಹರೇನ್‌ ಪೊಲೀಸರು ಅವರನ್ನು ಬಂಧಿಸಲು ಮುಂದಾಗಿದ್ದರು. ಅಷ್ಟರಲ್ಲಿ ಆಸ್ಟೇಲಿಯಾಗೆ ಬಂದಿದ್ದರು. ಆದರೆ ಪತ್ನಿ ಜೊತೆ ಥಾಯ್ಲೆಂಡ್‌ನಲ್ಲಿ ಮಧುಚಂದ್ರ ಆಚರಿಸುತ್ತಿದ್ದಾಗ ಅಲ್ಲಿನ ಪೊಲೀಸರ ಕೈಗೆ ಸಿಕ್ಕಿಬಿದ್ದರು.

ಥಾಯ್ಲೆಂಡಿನ ಕೋರ್ಟ್‌ನಲ್ಲಿ ಅವರ ವಿಚಾರಣೆ ನಡೆಯುತ್ತಿದ್ದು ಕಾಲಿಗೆ ಸಂಕೋಲೆ ಹಾಕಿ ‍ಪೊಲೀಸರು ಕರೆದುಕೊಂಡು ಹೋಗುತ್ತಿದ್ದ ಚಿತ್ರ ವೈರಲ್ ಆಗಿತ್ತು. ’ನಾನು ನಿರಪರಾಧಿಯಾಗಿದ್ದು ಇಲ್ಲದ ಪ್ರಕರಣದಲ್ಲಿ ಸಿಲುಕಿಸಲಾಗಿದೆ’ ಎಂದು ಹಕೀಮ್‌ ಹೇಳಿದ್ದಾರೆ.

ADVERTISEMENT

‘ಹಕೀಮ್‌ ಈಗ ಆಸ್ಟ್ರೇಲಿಯಾದ ನಿವಾಸಿಯಾಗಿದ್ದು ‍ಪಾಸ್ಕೊ ವೇಲ್ ಎಫ್‌ಸಿ ‍ಪರ ಆಡುತ್ತಿದ್ದಾರೆ’ ಎಂದು ಆಸ್ಟ್ರೇಲಿಯಾ ಫುಟ್‌ಬಾಲ್ ಫೆಡರೇಷನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇವಿಡ್ ಗಾಲೊಪ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.