ಫುಟ್‌ಬಾಲ್
ಬೆಂಗಳೂರು: ಬೆಂಗಳೂರು ಡ್ರೀಮ್ ಯುನೈಟೆಡ್ ಎಫ್‌ಸಿ ತಂಡ ಬಿಡಿಎಫ್‌ಎ ಎ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್ ಪಂದ್ಯದಲ್ಲಿ ಸೋಮವಾರ 4–1 ಗೋಲುಗಳಿಂದ ಎಫ್‌ಸಿ ಡೆಕ್ಕನ್ ವಿರುದ್ಧ ಜಯ ಸಾಧಿಸಿತು.
ಅಶೋಕನಗರದ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಡ್ರೀಮ್ ಯುನೈಟೆಡ್ ಪರ ಜೈ ಹರಿ ಬರ್ಮನ್ (24ನೇ, 86ನೇ ನಿ.) ಗೋಲು ಗಳಿಸಿದರು. ನಿಬಿನ್ ಆ್ಯಂಥೋನಿ ಪಿ.ಬಿ (56ನೇ ನಿ., ಉಡುಗೊರೆ ಗೋಲು), ಕೆ.ಲಾಲ್ರಿನ್‌ಫೆಲಾ (89ನೇ ನಿ.) ಗೋಲು ಹೊಡೆದರು. ಡೆಕ್ಕನ್ ತಂಡಕ್ಕೆ ಟಿಕಾ ಪ್ರಸಾದ್ ಭುಜೆಲ್ (36ನೇ ನಿ.) ಮೂಲಕ ಉಡುಗೊರೆ ಗೋಲು ಬಂತು.
ಡಿವೈಇಎಸ್ ಎಫ್‌ಸಿ ತಂಡ 4–2 ಗೋಲುಗಳಿಂದ ಶ್ರೀ ಗಜಾನನ ಎಫ್‌ಸಿ ತಂಡವನ್ನು ಮಣಿಸಿತು.ಡಿವೈಇಎಸ್ ತಂಡದ ಸಿರಿಲ್ ಜೋನ್ಸ್ (14ನೇ ನಿ.), ಭರತ್ ಗೌಡ ಕೆ.ಆರ್. (12ನೇ ನಿ.), ಶರಣಪ್ಪ (36ನೇ ನಿ.), ಮೋಧನ್ ಟಿ.ಎಂ. (86ನೇ ನಿ.) ಚೆಂಡನ್ನು ಗುರಿ ಸೇರಿಸಿದರು. ಗಜಾನನ ತಂಡದ ಪರ ಜಾನ್ಸ್ ಮುತ್ತುರಾಜ್ (45+ 3ನೇ, 53ನೇ ನಿ.) ಗೋಲು ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.