ADVERTISEMENT

ಬಿಡಿಯು ಎಫ್‌ಸಿಗೆ ಜಯ

ಬಿಡಿಎಫ್‌ಎ ಫುಟ್‌ಬಾಲ್‌ ಲೀಗ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 18:59 IST
Last Updated 27 ನವೆಂಬರ್ 2019, 18:59 IST
ಎಡಿಇ ಎಫ್‌ಸಿ ತಂಡದ ಸಲೀಂ ಎ.(ಎಡ) ಹಾಗೂ ಇನ್‌ಕಮ್‌ ಟ್ಯಾಕ್ಸ್ ನ ಸೈಯದ್‌ ಅಹ್ಮದ್‌ ನಡುವೆ ಚೆಂಡಿಗಾಗಿ ಪೈಪೋಟಿ–ಪ್ರಜಾವಾಣಿ ಚಿತ್ರ–ಶ್ರೀಕಂಠ ಶರ್ಮಾ. ಆರ್‌.
ಎಡಿಇ ಎಫ್‌ಸಿ ತಂಡದ ಸಲೀಂ ಎ.(ಎಡ) ಹಾಗೂ ಇನ್‌ಕಮ್‌ ಟ್ಯಾಕ್ಸ್ ನ ಸೈಯದ್‌ ಅಹ್ಮದ್‌ ನಡುವೆ ಚೆಂಡಿಗಾಗಿ ಪೈಪೋಟಿ–ಪ್ರಜಾವಾಣಿ ಚಿತ್ರ–ಶ್ರೀಕಂಠ ಶರ್ಮಾ. ಆರ್‌.   

ಬೆಂಗಳೂರು: ಬೆಂಗಳೂರು ಡ್ರೀಮ್‌ ಯುನೈಟೆಡ್‌ (ಬಿಡಿಯು) ಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಹಣಾಹಣಿಯಲ್ಲಿ ಬೆಂಗಳೂರು ಇಂಡಿಪೆಂಡೆಂಟ್ಸ್ ಎಫ್‌ಸಿಯನ್ನು 2–1ರಿಂದ ಮಣಿಸಿತು.

ಬುಧವಾರ ನಡೆದ ಪಂದ್ಯದಲ್ಲಿ ಬಿಡಿಯು ಪರ ಶಫೀಕ್ ತೆಕ್ಕುಂಪಟ್‌ (46ನೇ ನಿಮಿಷ) ಹಾಗೂ ವಿಷ್ಣು (61ನೇ ನಿಮಿಷ) ಗೋಲು ದಾಖಲಿಸಿದರೆ ಇಂಡಿಪೆಂಡೆಂಟ್ಸ್ ಪರ ನರೇಂದ್ರ (90+1ನೇ ನಿಮಿಷ) ಪೆನಾಲ್ಟಿ ಅವಧಿಯಲ್ಲಿ ಯಶಸ್ಸು
ಕಂಡರು.

ಮತ್ತೊಂದು ಪಂದ್ಯದಲ್ಲಿ ಎಡಿಇ ಎಫ್‌ಸಿ ತಂಡವು ಇನ್‌ಕಮ್‌ ಟ್ಯಾಕ್ಸ್ ಎಫ್‌ಸಿಯೊಂದಿಗೆ 2–2ರ ಡ್ರಾ ಸಾಧಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.