ADVERTISEMENT

ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ | ಬಿಎಫ್‌ಸಿ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 0:35 IST
Last Updated 29 ಸೆಪ್ಟೆಂಬರ್ 2025, 0:35 IST
<div class="paragraphs"><p>ಫುಟ್‌ಬಾಲ್‌</p></div>

ಫುಟ್‌ಬಾಲ್‌

   

ಬೆಂಗಳೂರು: ಸಂಘಟಿತ ಆಟವಾಡಿದ ಬಿಎಫ್‌ಸಿ ತಂಡವು ಕೆಎಸ್‌ಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ‍ಪಂದ್ಯದಲ್ಲಿ 3–0ಯಿಂದ ಭಾರತ್‌ ಬೆಂಗಳೂರು ಎಫ್‌ಸಿ ತಂಡವನ್ನು ಸುಲಭವಾಗಿ ಮಣಿಸಿತು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 7ನೇ ಸುತ್ತಿನ ಪಂದ್ಯದಲ್ಲಿ ಬಿಎಫ್‌ಸಿ ತಂಡದ ಆಶಿಕ್‌ ಅಧಿಕಾರಿ (14ನೇ ನಿ.), ಯೈಂಹರೆಂಬಾ ಚಿಂಗಂಗಖಂ (35ನೇ ನಿ.) ಹಾಗೂ ಸರ್ಟೊ ವೊರ್ನೈ ಲೆನ್‌ಕೊಮ್‌ (68ನೇ ನಿ.) ಅವರು ತಲಾ ಒಂದು ಗೋಲು ದಾಖಲಿಸಿದರು. ಭಾರತ್‌ ಬೆಂಗಳೂರು ತಂಡದ ಆಟಗಾರರು ಎದುರಾಳಿ ತಂಡದ ರಕ್ಷಣಾ ಕೋಟೆ ಭೇದಿಸುವಲ್ಲಿ ವಿಫಲರಾದರು.

ADVERTISEMENT

ಮತ್ತೊಂದು ಪಂದ್ಯದಲ್ಲಿ ಎಂಎಫ್‌ಎಆರ್‌ ಸ್ಟುಡೆಂಟ್ಸ್‌ ಯೂನಿಯನ್‌ ಎಫ್‌ಸಿ ತಂಡ 2–1ರಿಂದ ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎಫ್‌ಸಿ ಎದುರು ಗೆಲುವು ಸಾಧಿಸಿತು. ಎಂಎಫ್‌ಎಆರ್‌ ಪರ ವಾಂಖೊಲೆನ್‌ ಡೌಂಗೆಲ್‌ (52ನೇ ನಿ.) ಹಾಗೂ ಮಲ್ಸಾವ್ನ್‌ಡಾಂಗ್‌ ಕೀಮಾ (76 ನಿ.) ತಲಾ ಒಂದು ಗೋಲು ಹೊಡೆದರು. ಡ್ರೀಮ್‌ ಯುನೈಟೆಡ್‌ ಪರ ಮುಹಮ್ಮದ್‌ ಆದಿಲ್‌ ಶಾ (46ನೇ ನಿ.) ಏಕೈಕ ಗೋಲು ದಾಖಲಿಸಿದರು. ಪರಿಕ್ರಮ ಎಫ್‌ಸಿ ಹಾಗೂ ಸ್ಪೋರ್ಟಿಂಗ್‌ ಕ್ಲಬ್‌ ಬೆಂಗಳೂರು ನಡುವಣ ಪಂದ್ಯವು 1–1ರಲ್ಲಿ ಡ್ರಾ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.