ADVERTISEMENT

ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿ: ಬಿಎಫ್‌ಸಿಗೆ ಜಯ

​ಪ್ರಜಾವಾಣಿ ವಾರ್ತೆ
Published 6 ಜನವರಿ 2023, 21:22 IST
Last Updated 6 ಜನವರಿ 2023, 21:22 IST
   

ಗುವಾಹಟಿ: ಬಿಎಫ್‌ಸಿ ತಂಡದವರು ಇಂಡಿಯನ್‌ ಸೂಪರ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಕೊನೆಗೂ ಗೆಲುವಿನ ಹಾದಿಗೆ ಮರಳಿದರು.

ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಬಿಎಫ್‌ಸಿ 2–1 ಗೋಲುಗಳಿಂದ ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ತಂಡವನ್ನು ಮಣಿಸಿತು.

ಶಿವಶಕ್ತಿ ನಾರಾಯಣನ್‌ ಅವರು 50ನೇ ನಿಮಿಷದಲ್ಲಿ ಗೋಲು ಗಳಿಸಿ ಬೆಂಗಳೂರಿನ ತಂಡ ಮುನ್ನಡೆ ಗಳಿಸಲು ಕಾರಣರಾದರು. ಆದರೆ ರೊಮೇನ್‌ ಫಿಲಿಪೊಟೆಕ್ಸ್‌ ಅವರು 66ನೇ ನಿಮಿಷದಲ್ಲಿ ನಾರ್ತ್‌ಈಸ್ಟ್‌ ತಂಡಕ್ಕೆ ಸಮಬಲ ತಂದಿತ್ತರು.

ADVERTISEMENT

ಪಂದ್ಯ ಇನ್ನೇನು ಡ್ರಾದಲ್ಲಿ ಕೊನೆಗೊಳ್ಳಲಿದೆ ಎನ್ನುವಷ್ಟರಲ್ಲಿ ಅಲನ್‌ ಕೋಸ್ತಾ (90ನೇ ನಿ.) ಅವರು ಗೋಲು ಗಳಿಸಿ ಬಿಎಫ್‌ಸಿಗೆ ರೋಚಕ ಗೆಲುವು ತಂದುಕೊಟ್ಟರು. ಉದಾಂತ ಸಿಂಗ್‌ ನೀಡಿದ ಪಾಸ್‌ನಲ್ಲಿ ಅವರು ಚೆಂಡನ್ನು ಗುರಿ ಸೇರಿಸಿದರು.

13 ಪಂದ್ಯಗಳಿಂದ 13 ಪಾಯಿಂಟ್ಸ್‌ ಹೊಂದಿರುವ ಬಿಎಫ್‌ಸಿ ಪಾಯಿಂಟ್ಸ್‌ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.