ADVERTISEMENT

ವಿದಾಯ ಘೋಷಿಸಿದ ಇಟೊ

ಏಜೆನ್ಸೀಸ್
Published 7 ಸೆಪ್ಟೆಂಬರ್ 2019, 19:45 IST
Last Updated 7 ಸೆಪ್ಟೆಂಬರ್ 2019, 19:45 IST

ಪ್ಯಾರಿಸ್‌ (ಎಎಫ್‌ಪಿ): ನಾಲ್ಕು ಬಾರಿ ‘ವರ್ಷದ ಆಫ್ರಿಕನ್‌ ಆಟಗಾರ’ ಪ್ರಶಸ್ತಿ ಪಡೆದಿದ್ದ ಕ್ಯಾಮರೂನ್‌ನ ಸಾಮ್ಯುಯೆಲ್‌ ಇಟೊ ಶನಿವಾರ ಫುಟ್‌ಬಾಲ್‌ ಆಟಕ್ಕೆ ವಿದಾಯ ಹೇಳಿದರು.

38 ವರ್ಷದ ಇಟೊ ವೃತ್ತಿ ಜೀವನದಲ್ಲಿ ಕ್ಯಾಮರೂನ್‌ ತಂಡದ ಜೊತೆಗೆ ಬಾರ್ಸಿಲೋನಾ, ಇಂಟರ್‌ ಮಿಲಾನ್‌ ಮತ್ತು ಚೆಲ್ಸಿ ಪರ ಆಡಿದ್ದರು. 2004 ರಿಂದ 09ರವರೆಗೆ ಬಾರ್ಸಿಲೋನಾ ಪರ ಅವರು ಅತಿ ಹೆಚ್ಚಿನಯಶಸ್ಸು ಗಳಿಸಿದ್ದರು.

ಕ್ಯಾಮರೂನ್‌ ತಂಡ ಎರಡು ಬಾರಿ ಆಫ್ರಿಕ ಕಪ್‌ ಆಫ್‌ ನೇಷನ್ಸ್‌ ಟ್ರೋಫಿ ಮತ್ತು 2000ರಲ್ಲಿ (ಸಿಡ್ನಿ) ಒಲಿಂಪಿಕ್‌ ಚಿನ್ನ ಗೆಲ್ಲುವಲ್ಲೂ ಇಟೊ ಪ್ರಮುಖ ಪಾತ್ರ ವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.