ADVERTISEMENT

ಐಎಸ್‌ಎಲ್‌ ಫುಟ್‌ಬಾಲ್‌: ಚೆನ್ನೈಯಿನ್‌ ಸೇರಿದ ಸೌರವ್‌ ದಾಸ್‌

ಪಿಟಿಐ
Published 9 ಜೂನ್ 2022, 13:51 IST
Last Updated 9 ಜೂನ್ 2022, 13:51 IST

ಚೆನ್ನೈ: ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ (ಐಎಸ್‌ಎಲ್‌) ಎರಡು ಬಾರಿ ಚಾಂಪಿಯನ್‌ ಆಗಿರುವ ಚೆನ್ನೈಯಿನ್‌ ಫುಟ್‌ಬಾಲ್‌ ಕ್ಲಬ್‌ ತಂಡ, ಎರಡು ವರ್ಷಗಳ ಅವಧಿಗೆ ಸೌರವ್‌ ದಾಸ್‌ ಜತೆ ಒಪ್ಪಂದ ಮಾಡಿಕೊಂಡಿದೆ.

ಸೌರವ್‌ ಅವರ ಆಗಮನದಿಂದ ಚೆನ್ನೈಯಿನ್ ತಂಡದ ಮಿಡ್‌ಫೀಲ್ಡ್‌ನ ಬಲ ವೃದ್ಧಿಸಿದೆ. ಮುಂಬೈ ಸಿಟಿ, ಈಸ್ಟ್‌ ಬೆಂಗಾಲ್‌ ಮತ್ತು ಮೋಹನ್‌ ಬಾಗನ್ ತಂಡಗಳಲ್ಲಿ ಆಡಿರುವ ಅವರ ಅನುಭವ ತಂಡದ ನೆರವಿಗೆ ಬರಲಿದೆ.

’ಪ್ರಮುಖ ಮಿಡ್‌ಫೀಲ್ಡರ್‌ಗಳಲ್ಲಿ ಒಬ್ಬರಾದ ಸೌರವ್‌ ದಾಸ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಸಂತಸವಾಗುತ್ತಿದೆ. ಮೂರು ಕ್ಲಬ್‌ಗಳನ್ನು ಪ್ರತಿನಿಧಿಸಿರುವ ಅವರು ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಅದೇ ರೀತಿಯ ಆಟವನ್ನು ನಮ್ಮ ತಂಡದಲ್ಲೂ ಮುಂದುವರಿಸುವ ವಿಶ್ವಾಸವಿದೆ‘ ಎಂದು ಚೆನ್ನೈಯಿನ್‌ ತಂಡದ ಸಹ ಮಾಲೀಕರಾದ ವಿತಾ ದನಿ ಹೇಳಿದ್ದಾರೆ.

ADVERTISEMENT

’ಚೆನ್ನೈಯಿನ್‌, ಅದ್ಭುತ ಸಾಧನೆಗಳನ್ನು ಮಾಡಿರುವ ಕ್ಲಬ್‌. ತರಬೇತಿ ಮತ್ತು ಪಂದ್ಯಗಳಲ್ಲಿ ನನ್ನ ಶ್ರೇಷ್ಠ ಸಾಮರ್ಥ್ಯ ತೋರುತ್ತೇನೆ ಎಂಬ ಭರವಸೆಯನ್ನು ಆ ತಂಡ ಹಾಗೂ ಅಭಿಮಾನಿಗಳಿಗೆ ನೀಡುತ್ತೇನೆ‘ ಎಂದು ದಾಸ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.