ADVERTISEMENT

ಚೆನ್ನೈಯಿನ್‌ ಎಫ್‌ಸಿ ಸೇರಿದ ಮೆಮೊ

ಪಿಟಿಐ
Published 4 ಅಕ್ಟೋಬರ್ 2020, 13:38 IST
Last Updated 4 ಅಕ್ಟೋಬರ್ 2020, 13:38 IST
ಚೆನ್ನೈಯಿನ್‌ ಎಫ್‌ಸಿ ಲೋಗೊ
ಚೆನ್ನೈಯಿನ್‌ ಎಫ್‌ಸಿ ಲೋಗೊ   

ಚೆನ್ನೈ: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಎರಡು ಬಾರಿ ಚಾಂಪಿಯನ್ ಆಗಿರುವ ಚೆನ್ನೈಯಿನ್‌ ಎಫ್‌ಸಿ, ಬ್ರೆಜಿಲ್‌ನ ಎಮರ್ಸನ್‌ ಗೋಮ್ಸ್ ಡಿ ಮೌರಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. 2020–21ರ ಋತುವಿನ ಟೂರ್ನಿಗೆ ಫ್ರೀ ಟ್ರಾನ್ಸ್‌ಫರ್‌ ಆಧಾರದ ಮೇಲೆ ಅವರು ತಂಡಕ್ಕೆ ಸೇರಿದ್ದಾರೆ. ಈ ಆಟಗಾರಮೆಮೊ ಎಂದೇ ಹೆಚ್ಚು ಗುರುತಿಸಿಕೊಂಡಿದ್ದಾರೆ.

‘32 ವರ್ಷದ ಮೆಮೊ ಅವರ ಜೆಮ್‌ಶೆಡ್‌ಪುರ ಎಫ್‌ಸಿಯೊಂದಿಗಿನ (ಜೆಎಫ್‌ಸಿ) ಒಪ್ಪಂದ ಕೊನೆಗೊಂಡಿತ್ತು. ಈ ಹಿಂದಿನ ಮೂರು ಆವೃತ್ತಿಗಳಲ್ಲಿ ಅವರು ಜೆಮ್‌ಶೆಡ್‌ಪುರ ತಂಡದ ಪರ ಆಡಿದ್ದರು‘ ಎಂದು ಚೆನ್ನೈಯಿನ್‌ ಕ್ಲಬ್‌ ಭಾನುವಾರ ಹೇಳಿದೆ.

ಮಿಡ್‌ಫೀಲ್ಡ್‌ನ ಡಿಫೆನ್ಸಿವ್‌ ವಿಭಾಗದಲ್ಲಿ ಅವರು ಸೊಗಸಾದ ಆಟವಾಡಬಲ್ಲರು.

ADVERTISEMENT

’ಚೆನ್ನೈಯಿನ್‌ ಎಫ್‌ಸಿ ಕುಟುಂಬದ ಭಾಗವಾಗುತ್ತಿರುವುದಕ್ಕೆ ತುಂಬಾ ಖುಷಿಯೆನಿಸುತ್ತಿದೆ. ಮುಂಬರುವ ಐಎಸ್‌ಎಲ್‌ ಟೂರ್ನಿಯು ಅದ್ಭುತವಾಗಿರುತ್ತದೆ ಎಂಬ ವಿಶ್ವಾಸವಿದೆ. ಗ್ಯಾಲರಿಗಳಲ್ಲಿ ಅಭಿಮಾನಿಗಳು ಇಲ್ಲದಿದ್ದರೆ ಬೇಸರವಾಗುತ್ತದೆ‘ ಎಂದು ಸದ್ಯ ಬ್ರೆಜಿಲ್‌ನಲ್ಲಿರುವ ಮೆಮೊ ಹೇಳಿದ್ದಾರೆ.

ಬ್ರೆಜಿಲ್‌ನ ಡಿವಿಷನ್‌ ಲೀಗ್‌ಗಳಲ್ಲಿ ಆಡಿದ್ದ ಮೆಮೊ, 2016ರ ಐಎಸ್‌ಎಲ್‌ ಆವೃತ್ತಿಯಲ್ಲಿ ಡೆಲ್ಲಿ ಡೈನಮೊಸ್‌ (ಈಗ ಒಡಿಶಾ ಎಫ್‌ಸಿ) ಪರ ಪ‍ದಾರ್ಪಣೆ ಮಾಡಿದ್ದರು.

ಈ ಹಿಂದಿನ ಮೂರು ಆವೃತ್ತಿಗಳಲ್ಲಿ ಜೆಎಫ್‌ಸಿ ಪರ ಎಲ್ಲ ಪಂದ್ಯಗಳಲ್ಲೂ ಅವರು ಆಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.