ADVERTISEMENT

ಭಾರತ ತಂಡಕ್ಕೆ ಮರಳಿದ ಸುನಿಲ್ ಚೆಟ್ರಿ

28ರಂದು ಜೋರ್ಡಾನ್ ವಿರುದ್ಧ ಸ್ನೇಹಪರ ಫುಟ್‌ಬಾಲ್ ಪಂದ್ಯ

ಪಿಟಿಐ
Published 24 ಮೇ 2022, 13:40 IST
Last Updated 24 ಮೇ 2022, 13:40 IST
ಸುನಿಲ್ ಚೆಟ್ರಿ– ಪಿಟಿಐ ಚಿತ್ರ
ಸುನಿಲ್ ಚೆಟ್ರಿ– ಪಿಟಿಐ ಚಿತ್ರ   

ನವದೆಹಲಿ: ನಾಯಕ ಸುನಿಲ್ ಚೆಟ್ರಿ ಅವರು ಆರು ತಿಂಗಳುಗಳ ಬಳಿಕ ಭಾರತ ಫುಟ್‌ಬಾಲ್‌ ತಂಡಕ್ಕೆ ಮರಳಿದ್ದಾರೆ.

ಜೋರ್ಡಾನ್ ತಂಡದ ಎದುರು ಇದೇ 28ರಂದು ದೋಹಾದಲ್ಲಿ ನಡೆಯಲಿರುವ ಸ್ನೇಹಪರ ಪಂದ್ಯಕ್ಕೆ ಭಾರತದ 25 ಮಂದಿಯ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದ್ದು, ಚೆಟ್ರಿ ಸ್ಥಾನ ಪಡೆದಿದ್ದಾರೆ.

37 ವರ್ಷದ ಚೆಟ್ರಿ, ಹೋದ ವರ್ಷ ಅಕ್ಟೋಬರ್‌ನಲ್ಲಿ ಸ್ಯಾಫ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ನೇಪಾಳ ತಂಡದ ಎದುರು ಕೊನೆಯ ಪಂದ್ಯ ಆಡಿದ್ದರು. ಆ ಪಂದ್ಯದಲ್ಲಿ ಭಾರತ 3–0ಯಿಂದ ಜಯ ಸಾಧಿಸಿತ್ತು. ಆ ಬಳಿಕ ಗಾಯದ ಕಾರಣ ಕಣಕ್ಕಿಳಿದಿರಲಿಲ್ಲ.

ADVERTISEMENT

ತಂಡ ಇಂತಿದೆ: ಗೋಲ್‌ಕೀಪರ್ಸ್‌:ಗುರುಪ್ರೀತ್ ಸಿಂಗ್ ಸಂಧು, ಲಕ್ಷ್ಮೀಕಾಂತ್ ಕಟ್ಟಿಮನಿ, ಅಮರಿಂದರ್ ಸಿಂಗ್.

ಡಿಫೆಂಡರ್ಸ್: ರಾಹುಲ್ ಭೆಕೆ, ಆಕಾಶ್ ಮಿಶ್ರಾ, ಹರ್ಮನ್‌ಜೋತ್ ಸಿಂಗ್‌ ಖಾಬ್ರಾ, ರೋಷನ್ ಸಿಂಗ್, ಅನ್ವರ್ ಅಲಿ, ಸಂದೇಶ್ ಜಿಂಗಾನ್‌, ಸುಭಾಶಿಶ್ ಬೋಸ್, ಪ್ರೀತಮ್ ಕೋಟಲ್.

ಮಿಡ್‌ಫೀಲ್ಡರ್ಸ್: ಜೀಕ್ಸನ್ ಸಿಂಗ್, ಅನಿರುದ್ಧ್ ಥಾಪಾ, ಗ್ಲ್ಯಾನ್‌ ಮಾರ್ಟಿನ್ಸ್, ಬ್ರೆಂಡನ್‌ ಫೆರ್ನಾಂಡಿಸ್, ಋತ್ವಿಕ್ ದಾಸ್, ಉದಾಂತ ಸಿಂಗ್, ಯಾಸಿರ್ ಮೊಹಮ್ಮದ್, ಸಹಲ್ ಅಬ್ದುಲ್ ಸಮದ್, ಸುರೇಶ್ ವಾಂಗ್‌ಜಮ್, ಆಶಿಕ್ ಕುರುನಿಯನ್, ಲಿಸ್ಟನ್ ಕೊಲಾಕೊ.

ಫಾರ್ವರ್ಡ್ಸ್: ಇಶಾನ್ ಪಂಡಿತ, ಸುನಿಲ್ ಚೆಟ್ರಿ ಮತ್ತು ಮನ್ವೀರ್ ಸಿಂಗ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.