ಪೆರು ವಿರುದ್ಧದ ಪಂದ್ಯದಲ್ಲಿ ಚಿಲಿ ತಂಡದಅಲೆಕ್ಸಿಸ್ ಸ್ಯಾಂಚೆಜ್ ಅವರು ಚೆಂಡಿನ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವುದು –ಎಎಫ್‌ಪಿ ಚಿತ್ರ
ಆರ್ಲಿಂಗ್ಟನ್ (ಅಮೆರಿಕ): ಎರಡು ಬಾರಿಯ ಚಾಂಪಿಯನ್ ಚಿಲಿ, ಕೊಪಾ ಅಮೆರಿಕಾ ಟೂರ್ನಿಯ ಮೊದಲ ಪಂದ್ಯವನ್ನು ಶುಕ್ರವಾರ ಪೆರು ಜೊತೆ ಗೋಲಿಲ್ಲದೇ ಡ್ರಾ ಮಾಡಿಕೊಂಡಿತು.
‘ಎ’ ಗುಂಪಿನ ಪಂದ್ಯದಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿದವು. ಆದರೆ ಚಿಲಿ ತಂಡ ಒಂದೆರಡು ಅವಕಾಶಗಳಲ್ಲಿ ಗೋಲು ಗಳಿಸಲು ವಿಫಲವಾಯಿತು. ಹೀಗಾಗಿ ಗುಂಪಿನಿಂದ ಆರ್ಜೆಂಟೀನಾ ಮೊದಲ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ.
ವಿಕ್ಟರ್ ದವಿಲ್ಲಾ ಅವರ ಕೆಳಮಟ್ಟದ ಪಾಸ್‌ನಲ್ಲಿ ಇಂಟರ್‌ಮಿಲಾನ್ ಫಾರ್ವರ್ಡ್ ಅಲೆಕ್ಸಿಸ್ ಸ್ಯಾಂಚೆಸ್ ಅವರು ಚೆಂಡನ್ನು ಗೋಲಿನೊಳಕ್ಕೆ ಕಳುಹಿಸಲು ಯಾರ ತಡೆಯೂ ಇರಲಿಲ್ಲ. ಕಾಲಾವಕಾಶವೂ ಇತ್ತು. ಆದರೆ 35 ವರ್ಷದ ಸ್ಯಾಂಚೆಸ್ ಒದ್ದ ಚೆಂಡು ಗೋಲು ಬಾರ್ ಮೇಲಿಂದ ಹೋಯಿತು.ವಿರಾಮ ಸಮೀಪಿಸುವಾಗ ಪೆರು ತಂಡಕ್ಕೆ ದೊರೆತ ಅವಕಾಶವೊಂದರಲ್ಲಿ ಗಿಯಾನ್‌ಲುಕಾ ಲಪಡುಲಾ ಅವರು ಗುರಿತಪ್ಪಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.