ಫುಟ್‌ಬಾಲ್
ಬೆಂಗಳೂರು: ಎಂಪೈಯರ್ ಎಫ್‌ಸಿ ತಂಡ ದೌಲತ್ ಖಾನ್ ನಾಕೌಟ್ ಟೂರ್ನಿಯಲ್ಲಿ ಶನಿವಾರ ಸೆಮಿಫೈನಲ್ ಪ್ರವೇಶಿಸಿದೆ.
ಅಶೋಕನಗರದ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಸಿ ಡಿವಿಷಿನ್ ಕ್ಲಬ್ ಪಂದ್ಯದಲ್ಲಿ ಎಂಪೈಯರ್ ಎಫ್‌ಸಿ ತಂಡ 2–0 ಗೋಲುಗಳಿಂದ ಯಂಗ್ ಬಾಯ್ಸ್ ಎಫ್‌ಸಿ ತಂಡವನ್ನು ಮಣಿಸಿತು.
ಎಂಪೈಯರ್ ಎಫ್‌ಸಿ ತಂಡದ ಸಲೀಮ್ ಮುಷ್ತಾಕ್ (40ನೇ ನಿ.) ಮತ್ತು ಜಾಂಗ್‌ಗನ್ಲೆನ್ ಹಾಹೊಕಿಪ್ (60ನೇ ನಿ.) ಗೋಲು ಹೊಡೆದರು. ಸೆಮಿಫೈನಲ್‌ನಲ್ಲಿ ಎಂಪೈಯರ್ ಎಫ್‌ಸಿ ತಂಡ ಪ್ರೀಡಂ ಎಫ್‌ಸಿ ವಿರುದ್ಧ ಸೆಣಸಲಿದೆ.
ಎರಡನೇ ಸೆಮಿಫೈನಲ್‌ನಲ್ಲಿ ಹಂಪಿ ನಗರ ಎಫ್‌ಸಿ ತಂಡ ಬೆಂಗಳೂರು ಫ್ಯಾಂಟಮ್ ಎಫ್‌ಸಿ ವಿರುದ್ಧ ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.