ADVERTISEMENT

ಅಫ್ಗಾನಿಸ್ತಾನ ಫುಟ್‌ಬಾಲ್‌ ಪಟುಗಳ ಕುಟುಂಬದ ಸ್ಥಳಾಂತರ

ಪಿಟಿಐ
Published 15 ಅಕ್ಟೋಬರ್ 2021, 13:10 IST
Last Updated 15 ಅಕ್ಟೋಬರ್ 2021, 13:10 IST
ಅಫ್ಗಾನಿಸ್ತಾನದಲ್ಲಿ ನಡೆದ ಸ್ಥಳೀಯ ಫುಟ್‌ಬಾಲ್ ಟೂರ್ನಿಯೊಂದರ ಸಂದರ್ಭ –ಎಎಫ್‌ಪಿ ಚಿತ್ರ
ಅಫ್ಗಾನಿಸ್ತಾನದಲ್ಲಿ ನಡೆದ ಸ್ಥಳೀಯ ಫುಟ್‌ಬಾಲ್ ಟೂರ್ನಿಯೊಂದರ ಸಂದರ್ಭ –ಎಎಫ್‌ಪಿ ಚಿತ್ರ   

ಲಾಸೇನ್‌: ಮಹಿಳೆಯರು ಸೇರಿದಂತೆ ನೂರರಷ್ಟು ಫುಟ್‌ಬಾಲ್‌ ಪಟುಗಳ ಕುಟುಂಬಗಳನ್ನು ಅಫ್ಗಾನಿಸ್ತಾನದಿಂದ ಸ್ಥಳಾಂತರಿಸಲಾಗಿದೆ ಎಂದು ಫಿಫಾ ತಿಳಿಸಿದೆ. ಸಂಕೀರ್ಣ ಸಂಧಾನದ ಮೂಲಕಕತಾರ್‌ನ ಸಹಕಾರದೊಂದಿಗೆ ಕುಟುಂಬಗಳನ್ನು ಸುರಕ್ಷಿತ ತಾಣಗಳಿಗೆ ತಲುಪಿಸಲಾಗಿದೆ ಎಂದು ಅದು ವಿವರಿಸಿದೆ.

‘ಆಗಸ್ಟ್‌ನಲ್ಲಿ ಉಂಟಾದ ಕ್ಷಿಪ್ರ ಬೆಳವಣಿಗೆಯ ನಂತರ ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಪಡೆ ಆಡಳಿತದ ಚುಕ್ಕಾಣಿ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಫುಟ್‌ಬಾಲ್ ಪಟುಗಳ, ಅದರಲ್ಲೂ ವಿಶೇಷವಾಗಿ ಮಹಿಳೆಯರ ಸ್ಥಳಾಂತರ ಅನಿವಾರ್ಯವಾಗಿತ್ತು. ಇದು ಅತ್ಯಂತ ಎಚ್ಚರಿಕೆಯಿಂದ ನಡೆಸಿದ ಕಾರ್ಯಾಚರಣೆಯಾಗಿದೆ. ಇದಕ್ಕೆ ನೆರವು ನೀಡಿದ ಕತಾರ್ ಕಾರ್ಯ ಶ್ಲಾಘನೀಯ’ ಎಂದು ಫಿಫಾ ಹೇಳಿದೆ.

ಕತಾರ್ ಏರ್‌ವೇಸ್‌ನ ವಿಶೇಷ ವಿಮಾನದಲ್ಲಿ ಫುಟ್‌ಬಾಲ್ ಪಟುಗಳು ಮತ್ತು ಕುಟುಂಬದವರನ್ನು ಕಾಬೂಲ್‌ನಿಂದ ದೋಹ ವಿಮಾನ ನಿಲ್ದಾಣಕ್ಕೆ ಕರೆ ತರಲಾಗಿತ್ತು. ಸೆಪ್ಟೆಂಬರ್‌ನಲ್ಲಿ ಅಫ್ಗನ್ ಯೂತ್ ಫುಟ್‌ಬಾಲ್‌ ಆಟಗಾರ್ತಿಯರು ಪಾಕಿಸ್ತಾನಕ್ಕೆ ತೆರಳಿದ್ದರು. ಆದರೂ ಅನೇಕ ಮಂದಿ ಅಫ್ಗಾನಿಸ್ತಾನದಲ್ಲೇ ಉಳಿದಿದ್ದರು.

ADVERTISEMENT

ಕತಾರ್‌ನಲ್ಲಿ ಮುಂದಿನ ವರ್ಷ ಪುರುಷರ ವಿಶ್ವಕಪ್ ಫುಟ್‌ಬಾಲ್ ಟೂರ್ನಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.