ADVERTISEMENT

ಮೊದಲ ಜಯದ ತವಕದಲ್ಲಿ ಗೋವಾ, ಕೇರಳ

ಇಂಡಿಯನ್‌ ಸೂಪರ್ ಲೀಗ್‌ ಫುಟ್‌ಬಾಲ್‌ ಟೂರ್ನಿ

ಪಿಟಿಐ
Published 5 ಡಿಸೆಂಬರ್ 2020, 15:26 IST
Last Updated 5 ಡಿಸೆಂಬರ್ 2020, 15:26 IST
ನಾರ್ತ್‌ಈಸ್‌ ಯುನೈಟೆಡ್‌ ಎಫ್‌ಸಿ ಎದುರಿನ ಪಂದ್ಯದಲ್ಲಿ ಎಫ್‌ಸಿ ಗೋವಾ ತಂಡದ ಆಟಗಾರರು (ಕಪ್ಪು ಪೋಷಾಕು)– ಐಎಸ್‌ಎಲ್ ಮೀಡಿಯಾ ಸಂಗ್ರಹ ಚಿತ್ರ
ನಾರ್ತ್‌ಈಸ್‌ ಯುನೈಟೆಡ್‌ ಎಫ್‌ಸಿ ಎದುರಿನ ಪಂದ್ಯದಲ್ಲಿ ಎಫ್‌ಸಿ ಗೋವಾ ತಂಡದ ಆಟಗಾರರು (ಕಪ್ಪು ಪೋಷಾಕು)– ಐಎಸ್‌ಎಲ್ ಮೀಡಿಯಾ ಸಂಗ್ರಹ ಚಿತ್ರ   

ಮಡಗಾಂವ್‌: ಮೊದಲ ಜಯದ ನಿರೀಕ್ಷೆ ಹೊತ್ತಿರುವ ಎಫ್‌ಸಿ ಗೋವಾ ಹಾಗೂ ಕೇರಳ ಬ್ಲಾಸ್ಟರ್ಸ್‌ ತಂಡಗಳು ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಭಾನುವಾರ ಸೆಣಸಲಿವೆ.

ಕೇರಳ ಬ್ಲಾಸ್ಟರ್ಸ್ ವಿರುದ್ಧ ಈ ಹಿಂದಿನ ಸತತ ಆರು ಪಂದ್ಯಗಳಲ್ಲಿ ಸೋಲು ಕಾಣದ ಗೋವಾ ತಂಡವು ಅದೇ ಲಯದೊಂದಿಗೆ ಮುಂದುವರಿಯುವ ವಿಶ್ವಾಸದಲ್ಲಿದೆ. ಇಲ್ಲಿಯ ಫಟೋಡಾ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ಈ ಆವೃತ್ತಿಯಲ್ಲಿ ಉಭಯ ತಂಡಗಳು ತಲಾ ಮೂರು ಪಂದ್ಯಗಳಲ್ಲಿ ಆಡಿದ್ದು, ಎರಡೆರಡು ಪಾಯಿಂಟ್ಸ್ ಕಲೆಹಾಕಿವೆ. ಎಫ್‌ಸಿ ಗೋವಾ ಎಂಟನೇ ಸ್ಥಾನದಲ್ಲಿದ್ದರೆ, ಕೇರಳ ಬ್ಲಾಸ್ಟರ್ಸ್ ಒಂಬತ್ತನೇ ಸ್ಥಾನದಲ್ಲಿದೆ.

ADVERTISEMENT

ಟೂರ್ನಿಯಲ್ಲಿ ಕೇರಳ ತಂಡವು ಉತ್ತಮ ಆಟವಾಡಿದ್ದರೂ, ಗೋಲು ಗಳಿಸಲು ಅವಕಾಶಗಳನ್ನು ಸೃಷ್ಟಿಸಿಕೊಳ್ಳುವಲ್ಲಿ ಎಡವುತ್ತಿದೆ.

‘ಪ್ರತಿ ತಂಡಕ್ಕೂ ವಿಭಿನ್ನ ಸವಾಲುಗಳು ಇರುತ್ತವೆ. ಆದರೆ ಎಫ್‌ಸಿ ಗೋವಾ ಹಾಗೂ ನಮ್ಮ ತಂಡದ ಆಟದ ಶೈಲಿ ಹೆಚ್ಚಾಗಿ ಒಂದೇ ರೀತಿಯಲ್ಲಿದೆ. ಕಠಿಣ ಪೈಪೋಟಿ ನಡೆಯುವ ನಿರೀಕ್ಷೆಯಿದೆ‘ ಎಂದು ಕೇರಳ ತಂಡದ ಮುಖ್ಯ ಕೋಚ್‌ ಕಿಬು ವಿಕುನಾ ಹೇಳಿದ್ದಾರೆ.

ಜುವಾನ್ ಫರ್ನಾಂಡೊ ತರಬೇತಿಯಲ್ಲಿ ಪಳಗಿರುವ ಎಫ್‌ಸಿ ಗೋವಾ ಆಟಗಾರರೂ ಇದುವರೆಗೆ ಚೆಂಡಿನ ಮೇಲೆ ಹೆಚ್ಚು ಹತೋಟಿ ಸಾಧಿಸಿದ್ದಾರೆ. ಆದರೂ ಈ ಹಿಂದಿನ ಎರಡು ಪಂದ್ಯಗಳ ನಿರ್ಣಾಯಕ ಹಂತದಲ್ಲಿ ಎದುರಾಳಿಗಳಿಗೆ ಪಾಯಿಂಟ್ಸ್ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ತಂಡದ ಡಿಫೆನ್ಸ್ ವಿಭಾಗ ಬಲಗೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.