ADVERTISEMENT

ಫಿಫಾ ಅಂತರ ರಾಷ್ಟ್ರೀಯ ಸೌಹಾರ್ದ ಪಂದ್ಯ: ಉಜ್ಬೇಕಿಸ್ತಾನಕ್ಕೆ ಮಣಿದ ಭಾರತ

​ಪ್ರಜಾವಾಣಿ ವಾರ್ತೆ
Published 31 ಮೇ 2025, 0:00 IST
Last Updated 31 ಮೇ 2025, 0:00 IST
ಫುಟ್‌ಬಾಲ್
ಫುಟ್‌ಬಾಲ್   

ಬೆಂಗಳೂರು: ಆತಿಥೇಯ ಭಾರತ ಮಹಿಳಾ ಫುಟ್‌ಬಾಲ್ ತಂಡವು ಇಲ್ಲಿ ಶುಕ್ರವಾರ ನಡೆದ ಫಿಫಾ ಅಂತರ ರಾಷ್ಟ್ರೀಯ ಸೌಹಾರ್ದ ಪಂದ್ಯಗಳಲ್ಲಿ 0–1 ಗೋಲಿನಿಂದ ಉಜ್ಬೇಕಿಸ್ತಾನ ತಂಡದ ವಿರುದ್ಧ ಪರಾಭವಗೊಂಡಿತು.

ಇಲ್ಲಿನ ಪಡುಕೋಣೆ- ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ದಿಯೋರಾಖೋನ್ ಖಬಿಬುಲ್ಲಾಯೆವಾ ಅವರು 56ನೇ ನಿಮಿಷದಲ್ಲಿ ಉಜ್ಬೇಕಿಸ್ತಾನ ಪರ ಗೆಲುವಿನ ಗೋಲು ದಾಖಲಿಸಿದರು. 

ಜೂನ್ 3ರಂದು ಎರಡನೇ ಸೌಹಾರ್ದ ಪಂದ್ಯದಲ್ಲಿ ಈ ತಂಡಗಳು ಮತ್ತೆ ಮುಖಾಮುಖಿಯಾಗಲಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.