ADVERTISEMENT

ಫುಟ್‌ಬಾಲ್‌ | ಐವರು ಬದಲಿ ಆಟಗಾರರಿಗೆ ಅವಕಾಶ

ಏಜೆನ್ಸೀಸ್
Published 8 ಮೇ 2020, 19:30 IST
Last Updated 8 ಮೇ 2020, 19:30 IST
   

ಲೂಸೆನ್: ಕೋವಿಡ್‌–19 ಪಿಡುಗಿನ ನಿಯಂತ್ರಣದ ಬಳಿಕ ಫುಟ್‌ಬಾಲ್‌ ಪಂದ್ಯಗಳು ಆರಂಭವಾದರೆ, ತಂಡಗಳಿಗೆ ಐದು ಬದಲಿ ಆಟಗಾರರನ್ನು ಹೊಂದಲು ಅವಕಾಶ ನೀಡಲಾಗುವುದು ಎಂದು ಅಂತರರಾಷ್ಟ್ರೀಯ ಫುಟ್‌ಬಾಲ್‌ ಅಸೋಸಿಯೇಷನ್‌ ಮಂಡಳಿ (ಐಎಫ್‌ಎಬಿ) ಶುಕ್ರವಾರ ತಿಳಿಸಿದೆ.

‘ಆಟಗಾರರ ಹಿತರಕ್ಷಣೆ ಉದ್ದೇಶದಿಂದ ತಾತ್ಕಾಲಿಕ ಬದಲಾವಣೆಯಾಗಿ ಫಿಫಾ ಮುಂದಿಟ್ಟಿರುವ ಈ ಪ್ರಸ್ತಾವಕ್ಕೆ, ಫುಟ್‌ಬಾಲ್‌ ನಿಯಮಗಳನ್ನು ರೂಪಿಸುವ ಐಎಫ್‌ಎಬಿ ಒಪ್ಪಿಗೆ ನೀಡಿದೆ’ ಎಂದು ಐಎಫ್‌ಎಬಿ ಹೇಳಿದೆ.

ಈ ತಿದ್ದುಪಡಿಯು ತಕ್ಷಣದಿಂದಲೇ ಜಾರಿಗೆ ಬರಲಿದ್ದು ವರ್ಷಾಂತ್ಯದವರೆಗೆ ಅನ್ವಯವಾಗಲಿದೆ. ಇದೇ ನಿಯಮವನ್ನು ಮುಂದುವರಿಸಬೇಕೆ ಬೇಡವೇ ಎಂಬುದನ್ನು ನಂತರ ನಿರ್ಧರಿಸಲಾಗುವುದು ಎಂದು ಫಿಫಾ ಹಾಗೂ ಐಎಫ್‌ಎಬಿ ಹೇಳಿವೆ.

ADVERTISEMENT

ಸದ್ಯ ಫುಟ್‌ಬಾಲ್‌ ಪಂದ್ಯಗಳಲ್ಲಿ ಮೂವರು ಬದಲಿ ಆಟಗಾರರಿಗೆ ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.