ADVERTISEMENT

ಹಿರಿಯ ಫುಟ್‌ಬಾಲ್‌ ಕೋಚ್‌ ಬಿಲಾರ್ಡೊಗೆ ಕೋವಿಡ್‌

ರಾಯಿಟರ್ಸ್
Published 27 ಜೂನ್ 2020, 7:30 IST
Last Updated 27 ಜೂನ್ 2020, 7:30 IST
ಕಾರ್ಲೊಸ್‌ ಬಿಲಾರ್ಡೊ–ಎಎಫ್‌ಪಿ ಚಿತ್ರ
ಕಾರ್ಲೊಸ್‌ ಬಿಲಾರ್ಡೊ–ಎಎಫ್‌ಪಿ ಚಿತ್ರ   

ಸಾವೊ ಪಾಲೊ: 1986ರ ಫುಟ್‌ಬಾಲ್‌ ವಿಶ್ವಕಪ್‌ ಟೂರ್ನಿಯ ವೇಳೆ ಅರ್ಜೆಂಟೀನಾ ತಂಡಕ್ಕೆ ತರಬೇತಿ ನೀಡಿದ್ದ ಕಾರ್ಲೊಸ್‌ ಬಿಲಾರ್ಡೊ ಅವರಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿದೆ. ಅವರ ಕುಟುಂಬದ ಮೂಲಗಳು ಶುಕ್ರವಾರ ಈ ವಿಷಯ ಬಹಿರಂಗಪಡಿಸಿವೆ.

‘ಬಿಲಾರ್ಡೊ ಅವರ ತಪಾಸಣೆ ನಡೆಸಲಾಗಿದ್ದು ಸೋಂಕು ಪತ್ತೆಯಾಗಿದೆ. ಆದರೆ ಅವರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ; ಆರೋಗ್ಯವಾಗಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

82 ವರ್ಷದ ಬಿಲಾರ್ಡೊ ಅವರು ಎಸ್ಟುಡಿಯಂಟಸ್‌ ಫುಟ್‌ಬಾಲ್‌ ಕ್ಲಬ್‌ನ ಆಟಗಾರ ಹಾಗೂ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಾರೆ. 1968–70ರ ಅವಧಿಯಲ್ಲಿ ಈ ಕ್ಲಬ್‌ ಪರ ಆಡಿದ್ದ ಬಿಲಾರ್ಡೊ, ತಂಡವು ಮೂರು ಬಾರಿ ಕೋಪಾ ಲಿಬರ್ಟಾಡೋರ್ಸ್‌ ಕಪ್‌ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ADVERTISEMENT

ಡಿಗೊ ಮರಡೋನಾ ನೇತೃತ್ವದ ಅರ್ಜೆಂಟೀನಾ ತಂಡ 1986ರಲ್ಲಿ ಮೆಕ್ಸಿಕೊದಲ್ಲಿ ನಡೆದ ವಿಶ್ವಕಪ್‌ನಲ್ಲಿ ಚಾಂಪಿಯನ್‌ ಪಟ್ಟ ಧರಿಸಿತ್ತು. ಈ ತಂಡಕ್ಕೆ ಬಿಲಾರ್ಡೊ ಮಾರ್ಗದರ್ಶನ ಇತ್ತು. 1990ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಬಿಲಾರ್ಡೊ ತರಬೇತಿಯಲ್ಲಿ ಪಳಗಿದ್ದ ತಂಡ ರನ್ನರ್‌ ಅಪ್‌ ಆಗಿತ್ತು.

ಕೋವಿಡ್‌–19 ಪಿಡುಗಿನಿಂದ ಅರ್ಜೆಂಟೀನಾದಲ್ಲಿ 1,184 ಸಾವನ್ನಪ್ಪಿದ್ದಾರೆ ಎಂದು ಅಲ್ಲಿಯ ಆರೋಗ್ಯ ಸಚಿವಾಲಯದ ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.