ADVERTISEMENT

ಫುಟ್‌ಬಾಲ್‌: ಅಲ್ಕೆಮಿ ತಂಡಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 4:10 IST
Last Updated 9 ಜೂನ್ 2025, 4:10 IST
<div class="paragraphs"><p>ಫುಟ್‌ಬಾಲ್‌</p></div>

ಫುಟ್‌ಬಾಲ್‌

   

ಬೆಂಗಳೂರು: ಸಂಫ್ರಾಂಗ್ ಶಾಯಿ ರಾಣಿ ಅವರ ಆಟದ ನೆರವಿನಿಂದ ಅಲ್ಕೆಮಿ ಐಎಫ್‌ಎ ತಂಡವು ಕೆಎಸ್‌ಎಫ್‌ಎ ವೈಪಿಎಲ್‌ (21 ವರ್ಷದೊಳಗಿನವರ) ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ 4–1 ಗೋಲುಗಳಿಂದ ರಾಮನ್ ಎಸ್.ಎ ತಂಡವನ್ನು ಮಣಿಸಿತು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಸಂಫ್ರಾಂಗ್ (66ನೇ ಮತ್ತು 68ನೇ ನಿಮಿಷ) ಎರಡು ಗೋಲು ಗಳಿಸಿದರು. ಮೈಬಮ್ ಡೇವಿಡ್ ಸಿಂಗ್ (45+3ನೇ) ಮತ್ತು ಫ್ರಾನ್ಸಿಸ್ ರೊಸಾಂಗ್ಲಿಯಾನ (63ನೇ) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು. ರಾಮನ್‌ ತಂಡದ ಪರ ರಾಹುಲ್‌ ಎಂ (12ನೇ) ಒಂದು ಗೋಲು ತಂದಿತ್ತರು.

ADVERTISEMENT

ದಿನದ ಮತ್ತೊಂದು ಪಂದ್ಯದಲ್ಲಿ ಸ್ಟಾರ್‌ ಸಾಕರ್ ತಂಡವು 1–0 ಗೋಲಿನಿಂದ ಸ್ಪೋರ್ಟ್ಸ್‌ಹುಡ್‌ ಎಫ್‌ಸಿ ತಂಡವನ್ನು ಸೋಲಿಸಿತು. ಸ್ಟಾರ್‌ ತಂಡದ ಪರ ಲಿನ್ಸನ್ ಜಾನ್ (52ನೇ) ಏಕೈಕ ಗೋಲು ದಾಖಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.