ADVERTISEMENT

‘ಚಿನ್ನದ ಬೂಟು’ ಮೆಸ್ಸಿ ಪಾಲು

ಸತತ ಮೂರನೇ ವರ್ಷ ಯುರೋಪಿಯನ್‌ ಲೀಗ್‌ನಲ್ಲಿ ಗರಿಷ್ಠ ಗೋಲು ಗಳಿಕೆ

ರಾಯಿಟರ್ಸ್
Published 25 ಮೇ 2019, 17:26 IST
Last Updated 25 ಮೇ 2019, 17:26 IST
ಲಿಯೊನೆಲ್‌ ಮೆಸ್ಸಿ
ಲಿಯೊನೆಲ್‌ ಮೆಸ್ಸಿ   

ಬಾರ್ಸಿಲೋನಾ: ಸತತ ಮೂರನೇ ವರ್ಷ ಯುರೋಪ್‌ನ ‘ಚಿನ್ನದ ಬೂಟು’ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ಖ್ಯಾತಿ ಲಯೊನೆಲ್‌ ಮೆಸ್ಸಿ ಪಾಲಾಗಲಿದೆ. ಬಾರ್ಸಿಲೋನಾ ಪರ ಈ ಬಾರಿ ಮೆಸ್ಸಿ ಒಟ್ಟು 36 ಗೋಲುಗಳನ್ನು ಬಾರಿಸಿದ್ದಾರೆ. ಅವರ ಹತ್ತಿರದ ಪ್ರತಿಸ್ಪರ್ಧಿ ಕಿಲಿಯನ್‌ ಬಾಪೆ 33 ಗೋಲುಗಳ ಒಡೆಯರಾದರು.

ಯುರೋಪ್‌ನ ಪ್ರಮುಖ ಲೀಗ್‌ ತಂಡಗಳಲ್ಲಿ ಹೆಚ್ಚು ಗೋಲು ದಾಖಲಿಸಿದ ಆಟಗಾರನಿಗೆ ಈ ಗೌರವ ನೀಡಲಾಗುತ್ತದೆ. ಪ್ಯಾರಿಸ್‌ ಸೈಂಟ್‌ ಜರ್ಮನ್‌ ತಂಡದ‍ಪರ ಆಡುವ ಬಾಪೆ ಅವರು ಅಂತಿಮ ಲೀಗ್‌ ಪಂದ್ಯದಲ್ಲಿ ಕೇವಲ ಒಂದು ಗೋಲು ಮಾತ್ರ ಗಳಿಸಿದರು. ನಾಲ್ಕು ಗೋಲು ಗಳಿಸಿದ್ದರೆಅವರು ಮೆಸ್ಸಿಯನ್ನು ಹಿಂದಿಕ್ಕಬಹುದಾಗಿತ್ತು.

ಮೆಸ್ಸಿ ದಾಖಲಿಸಿದ ಗೋಲುಗಳ ಗೊಂಚಲು ಹೋದ ತಿಂಗಳು ಬಾರ್ಸಿಲೋನಾ ತಂಡವು ಲಾ ಲಿಗಾ ಟೂರ್ನಿಯನ್ನು ಜಯಿಸಲು ನೆರವಾಗಿತ್ತು. ‘ಚಿನ್ನದ ಬೂಟು’ ಗೌರವಕ್ಕೆ ಪಾತ್ರವಾಗಿರುವ ಕುರಿತು ಮಾತನಾಡಿರುವ ಮೆಸ್ಸಿ ‘ನಮ್ಮ ತಂಡವು ಚಾಂಪಿಯನ್ಸ್‌ ಲೀಗ್‌ನಲ್ಲಿ ಲಿವರ್‌ಪೂಲ್‌ ತಂಡದಿಂದ ಎಲಿಮಿನೇಟ್‌ ಆಗಿರುವ ಚಿಂತೆಯಿಂದ ಹೊರಬರಬೇಕಿದೆ, ವೈಯಕ್ತಿಕ ಪ್ರಶಸ್ತಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.