ADVERTISEMENT

ಹೈದರಾಬಾದ್‌–ಜೆಎಫ್‌ಸಿ ಪಂದ್ಯ ಡ್ರಾ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2020, 16:17 IST
Last Updated 2 ಡಿಸೆಂಬರ್ 2020, 16:17 IST
ಹೈದರಾಬಾದ್ ಎಫ್‌ಸಿ ಹಾಗೂ ಜಮ್ಶೆಡ್‌ಪುರ ಎಫ್‌ಸಿ ಆಟಗಾರರ ಪೈಪೋಟಿ–ಪಿಟಿಐ ಚಿತ್ರ
ಹೈದರಾಬಾದ್ ಎಫ್‌ಸಿ ಹಾಗೂ ಜಮ್ಶೆಡ್‌ಪುರ ಎಫ್‌ಸಿ ಆಟಗಾರರ ಪೈಪೋಟಿ–ಪಿಟಿಐ ಚಿತ್ರ   

ವಾಸ್ಕೊ: ಪಂದ್ಯದ ಕೊನೆಯ ಹಂತದಲ್ಲಿ ಗೋಲು ಗಳಿಸಿದ ಸ್ಟೀಫನ್‌ ಎಜೆ ಅವರು ಜಮ್ಶೆಡ್‌ಪುರ ಎಫ್‌ಸಿ (ಜೆಎಫ್‌ಸಿ) ತಂಡವು ಹೈದರಾಬಾದ್ ಎಫ್‌ಸಿಯೊಡನೆ ಡ್ರಾ ಸಾಧಿಸಲು ನೆರವಾದರು. ಇಲ್ಲಿಯ ತಿಲಕ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಇಂಡಿಯನ್‌ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಹಣಾಹಣಿಯಲ್ಲಿ ಉಭಯ ತಂಡಗಳು 1–1ರ ಸಮಬಲ ಸಾಧಿಸಿದವು.

ಹೈದರಾಬಾದ್‌ ಪರ ಅರಿದಾನೆ ಸಂಟಾನಾ 50ನೇ ನಿಮಿಷದಲ್ಲಿ ಸೊಗಸಾದ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. 87ನೇ ನಿಮಿಷದಲ್ಲಿ ಸ್ಟೀಪನ್‌ ಎಜೆ ಅವರು ಲಾಲ್‌ನುನ್ಫೆಲಾ ಅವರ ನೆರವಿನೊಂದಿಗೆ ಗೋಲು ದಾಖಲಿಸಿ ಪಂದ್ಯದ ಸಮಬಲಕ್ಕೆ ಕಾರಣರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT