ನವದೆಹಲಿ: ದೇಶದ ಎರಡನೇ ಸ್ಥರದ ಫುಟ್‌ಬಾಲ್ ಲೀಗ್ ಆಗಿರುವ ಐ ಲೀಗ್‌ಗೆ ‘ಇಂಡಿಯನ್ ಫುಟ್‌ಬಾಲ್ ಲೀಗ್’ (ಐಎಫ್‌ಎಲ್) ಎಂದು ಮರುನಾಮಕರಣ ಮಾಡಲಾಗಿದೆ. ಲೀಗ್ ಪುನರ್ರಚಿಸಲೂ ನಿರ್ಧರಿಸಲಾಗಿದೆ. ಫೆಬ್ರುವರಿ 21ರಂದು ಆರಂಭವಾಗುವ ಐಎಫ್‌ಎಲ್ ಆಯೋಜನೆಯಲ್ಲಿ ಕ್ಲಬ್‌ಗಳೇ ಹೆಚ್ಚಿನ ಪಾಲುದಾರಿಕೆ ಹೊಂದಲಿವೆ.
ಕ್ಲಬ್ ಪ್ರತಿನಿಧಿಗಳು ಮತ್ತು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ಪದಾಧಿಕಾರಿಗಳ ನಡುವೆ ಬುಧವಾರ ನಡೆದ ಮಾತುಕತೆಯ ನಂತರ ಐ ಲೀಗ್‌ಗೆ ಹೊಸ ಹೆಸರಿಡಲು ನಿರ್ಧರಿಸಲಾಯಿತು. ಈ ನಿರ್ಧಾರಕ್ಕೆ ಎಐಎಫ್‌ಎಫ್‌ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಂಗೀಕಾರ ದೊರೆಯಬೇಕಿದೆ. ಆದರೆ ಇದು ಔಪಚಾರಿಕವಷ್ಟೇ ಆಗಿದೆ.
‘ಐ ಲೀಗ್ ಹೆಸರು ಬದಲಾಯಿಸಲು ಮತ್ತು ಲೀಗ್ ಆಯೋಜನೆಯಲ್ಲಿ ಬದಲಾವಣೆಗಳನ್ನು ತರಲು ಈ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದಕ್ಕೆ ಫೆಡರೇಷನ್‌ನ ಕಾರ್ಯಕಾರಿ ಸಮಿತಿಯ ಸಮ್ಮತಿ ದೊರೆಯಬೇಕಿದೆ’ ಎಂದು ಶಿಲ್ಲಾಂಗ್ ಲಾಜೊಂಗ್ ಮಾಲೀಕ ಲರ್ಸಿಂಗ್ ಮಿಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಎಫ್‌ಎಸ್‌ಡಿಎಲ್, ಮೂಲ ಒಪ್ಪಂದ ನವೀಕರಣಕ್ಕೆ ವಿಫಲವಾದ ನಂತರ ಎಐಎಫ್‌ಎಫ್ ಹೊಸ ವಾಣಿಜ್ಯ ಪಾಲುದಾರನನ್ನು ಕಂಡುಕೊಳ್ಳುವಲ್ಲಿ ವಿಫಲವಾಗಿತ್ತು. ಹೀಗಾಗಿ ಐಎಸ್‌ಎಲ್ ಮತ್ತು ಐ ಲೀಗ್ ನಡೆಯುವುದು ಅನಿಶ್ಚಿತವಾಗಿತ್ತು. ಕ್ರೀಡಾ ಸಚಿವಾಲಯ ಮಧ್ಯಪ್ರವೇಶಿಸಿದ ನಂತರ ಈ ಲೀಗ್‌ಗಳ ಆರಂಭಕ್ಕೆ ಕ್ಷಣಗಣನೆ ನಡೆಯುತ್ತಿದೆ. ಐಎಸ್‌ಎಲ್ ಫೆ. 14ರಂದು ಆರಂಭವಾಗಲಿದೆ. ಇದಾಗಿ ವಾರದ ಬಳಿಕ ಐಎಫ್‌ಎಲ್ ಆರಂಭವಾಗಲಿದೆ.
1996 ರಿಂದ 2007ರವರೆಗೆ ದೇಶದ ಅಗ್ರಸ್ಥರದ ಲೀಗ್‌ಗೆ ಈ ಹಿಂದೆ ಎನ್‌ಎಫ್‌ಎಲ್ ಎಂಬ ಹೆಸರಿತ್ತು. 2014ರಲ್ಲಿ ಐಎಸ್‌ಎಲ್ ಆರಂಭವಾಯಿತು. ಐ ಲೀಗ್ ದೇಶದ ಎರಡನೇ ಸ್ಥರದ ಲೀಗ್ ಆಯಿತು.
ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ ಮತ್ತು ಮಿಜೋರಾಮ್‌ನ ಚನ್ಮಾರಿ ಎಫ್‌ಸಿ ತಂಡಗಳು 2024–25ನೇ ಸಾಲಿಗೆ ಐ ಲೀಗ್‌ಗೆ ಬಡ್ತಿ ಪಡೆದಿವೆ.
ಲೀಗ್‌ನ ಆಡಳಿತ ಮಂಡಳಿಯಲ್ಲಿ ಪ್ರತಿಯೊಂದು ಕ್ಲಬ್‌ನ ಪ್ರತಿನಿಧಿಗಳು ಇರುತ್ತಾರೆ. ಎಐಎಫ್‌ಎಫ್‌ನ ಮೂವರು ಮತ್ತು ವಾಣಿಜ್ಯ ಪಾಲುದಾರ ಸಂಸ್ಥೆಯ (ಇನ್ನೂ ನಿರ್ಧಾರವಾಗಿಲ್ಲ) ಮೂವರು ಪ್ರತಿನಿಧಿಗಳು ಇರಲಿದ್ದು, ಈ ಮಂಡಳಿಯು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂದು ಎಐಎಫ್‌ಎಫ್ ಉಪ ಕಾರ್ಯದರ್ಶಿ ಎಂ.ಸತ್ಯನಾರಾಯಣ ತಿಳಿಸಿದರು.
11 ಕ್ಲಬ್‌ಗಳು ಪಾಲ್ಗೊಂಡಲ್ಲಿ ಐಎಫ್‌ಎಲ್‌ನಲ್ಲಿ 80 ಪಂದ್ಯಗಳಿರಲಿವೆ. ಆದರೆ 10 ತಂಡಗಳು ಮಾತ್ರ ಇದ್ದಲ್ಲಿ ಪಂದ್ಯಗಳ ಸಂಖ್ಯೆ 70ಕ್ಕಿಂತ ಕಡಿಮೆಯಾಗಲಿದೆ. ಎಷ್ಟು ಕ್ಲಬ್‌ಗಳು ಆಡಲಿವೆ ಎಂಬುದು ಫೆ. 2ರ ಬಳಿಕವಷ್ಟೇ ಗೊತ್ತಾಗಲಿವೆ.
ಎಲ್ಲ ಕ್ಲಬ್‌ಗಳು ರೌಂಡ್‌ರಾಬಿನ್ ಲೀಗ್ ಮಾದರಿಯಲ್ಲಿ (ತವರು ಮತ್ತು ಹೊರಗೆ) ಆಡಲಿವೆ. ಕೆಲವು ಕ್ಲಬ್‌ಗಳು ತವರಿನಲ್ಲಿ ಮತ್ತೆ ಕೆಲವು ಕ್ಲಬ್‌ಗಳು ತವರಿನಿಂದಾಚೆ ಆಡಲಿವೆ. ಕೊನೆಯ ಎರಡು ಸ್ಥಾನ ಪಡೆಯುವ ತಂಡಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.