ADVERTISEMENT

ಇಂಡಿಪೆಂಡೆನ್ಸ್ ಕಪ್ Football ಟೂರ್ನಿ:ಮಣಿಪಾಲ ಶಾಲೆ ಫೈನಲ್‌ಗೆ; ಯೆನೆಪೋಯ ಸೆಮಿಗೆ

ಇಂಡಿಪೆಂಡೆನ್ಸ್ ಕಪ್ ಫುಟ್‌ಬಾಲ್‌ ಟೂರ್ನಿ: ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟ ಪಿಎ, ಮಂಗಳಾ ತಂಡಗಳು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 15:19 IST
Last Updated 12 ಆಗಸ್ಟ್ 2024, 15:19 IST
ಹೈಸ್ಕೂಲ್‌ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಮಣಿಪಾಲ ಶಾಲೆಯ (ಬಲ) ಆಟಗಾರನಿಂದ ಚೆಂಡು ಕಸಿದುಕೊಳ್ಳಲು ಪ್ರಯತ್ನಿಸಿದ  ಮಿಲಾಗ್ರಿಸ್‌ ಶಾಲೆ ತಂಡದ ಆಟಗಾರ –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್
ಹೈಸ್ಕೂಲ್‌ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಮಣಿಪಾಲ ಶಾಲೆಯ (ಬಲ) ಆಟಗಾರನಿಂದ ಚೆಂಡು ಕಸಿದುಕೊಳ್ಳಲು ಪ್ರಯತ್ನಿಸಿದ  ಮಿಲಾಗ್ರಿಸ್‌ ಶಾಲೆ ತಂಡದ ಆಟಗಾರ –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್   

ಮಂಗಳೂರು: ಏಕೈಕ ಗೋಲಿನ ಬಲದಿಂದ ಎದುರಾಳಿ ತಂಡವನ್ನು ಮಣಿಸಿದ ಮಣಿಪಾಲ ಶಾಲೆ ತಂಡ ಇಂಡಿಪೆಂಡೆನ್ಸ್ ಕಪ್ ಫುಟ್‌ಬಾಲ್ ಟೂರ್ನಿಯ ಹೈಸ್ಕೂಲ್ ಬಾಲಕರ ವಿಭಾಗದ ಫೈನಲ್ ಪ್ರವೇಶಿಸಿತು.

ಜಿಲ್ಲಾ ಫುಟ್‌ಬಾಲ್ ಸಂಸ್ಥೆ ನಗರದ ನೆಹರೂ ಮೈದಾನದಲ್ಲಿ ಆಯೋಜಿಸಿರುವ ಟೂರ್ನಿಯ ಸೋಮವಾರದ ಪಂದ್ಯದಲ್ಲಿ ಮಣಿಪಾಲ ತಂಡ 1–0ಯಿಂದ ಮಿಲಾಗ್ರಿಸ್ ಸೆಂಟ್ರಲ್ ಸ್ಕೂಲ್ ತಂಡದ ವಿರುದ್ಧ ಗೆಲುವು ಸಾಧಿಸಿತು.

ಕಾಲೇಜು ವಿಭಾಗದಲ್ಲಿ ಯೆನೆಪೋಯ ‘ಎ’ ಮತ್ತು ‘ಬಿ’ ತಂಡಗಳು, ಪಿ.ಎ ಕಾಲೇಜು ‘ಎ’ ತಂಡ ಮತ್ತು ಮಂಗಳಾ ಸಂಸ್ಥೆಗಳು ಸೆಮಿಫೈನಲ್ ಪ್ರವೇಶಿಸಿದವು.

ADVERTISEMENT

ಕಳೆದ ಬಾರಿಯ ರನ್ನರ್ ಅಪ್, ಮಡಂತ್ಯಾರ್‌ನ ಸೇಕ್ರೆಡ್ ಹಾರ್ಟ್ ಕಾಲೇಜು ತಂಡವನ್ನು ಭಾನುವಾರ ಮಣಿಸಿದ್ದ ಎನ್‌ಎಂಎಎಂ ತಾಂತ್ರಿಕ ಕಾಲೇಜು ಸೋಮವಾರ ನಿರಾಸೆ ಅನುಭವಿಸಿತು. ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಯೆನೆಪೋಯ ‘ಬಿ’ ತಂಡ ಎನ್‌ಎಂಎಎಂ ವಿರುದ್ಧ 1–0ಯಿಂದ ಜಯಿಸಿತು.

ಯೆನೆಪೋಯ ‘ಎ’ ತಂಡ 3–0ಯಿಂದ ಟಿಪ್ಪು ಸುಲ್ತಾನ್ ಕಾಲೇಜು ಎದುರು ಜಯ ಸಾಧಿಸಿತು. ಪಿಎ ಕಾಲೇಜು ತಂಡಗಳು ಮಿಶ್ರ ಫಲ ಅನುಭವಿಸಿವು. ಶೂಟೌಟ್‌ಗೆ ತಲುಪಿದ ರೋಚಕ ಪಂದ್ಯದಲ್ಲಿ ಪಿಎ ‘ಎ’ ತಂಡ ಸಹ್ಯಾದ್ರಿ ಕಾಲೇಜು ತಂಡವನ್ನು 5–4ರಲ್ಲಿ ಮಣಿಸಿದರೆ ಮಂಗಳಾ ಸಂಸ್ಥೆ ಪಿಎ ‘ಬಿ’ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ (3–2) ಪರಾಭವಗೊಳಿಸಿತು. ಎರಡೂ ಪಂದ್ಯಗಳು ನಿಗದಿತ ಅವಧಿಯಲ್ಲಿ ಗೋಲುರಹಿತ ಸಮಬಲದಲ್ಲಿ ಮುಕ್ತಾಯಗೊಂಡಿದ್ದವು.

ಕಾಲೇಜು ವಿಭಾಗದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಪಿಎ ಕಾಲೇಜು ‘ಬಿ’ (ಎಡ) ಮತ್ತು ಮಂಗಳಾ ಸಂಸ್ಥೆಯ ಆಟಗಾರರು ಚೆಂಡಿನ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದ ಸಂದರ್ಭ –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.