ADVERTISEMENT

ಫುಟ್‌ಬಾಲ್‌: ‘ಇ’ ಗುಂಪಿನಲ್ಲಿ ಭಾರತ ತಂಡ

2020ರ ವಿಶ್ವಕಪ್‌ ಫುಟ್‌ಬಾಲ್‌ಗೆ ಏಷ್ಯಾ ತಂಡಗಳ ಅರ್ಹತಾ ಸುತ್ತಿನ ಟೂರ್ನಿ

ಪಿಟಿಐ
Published 17 ಜುಲೈ 2019, 19:03 IST
Last Updated 17 ಜುಲೈ 2019, 19:03 IST

ಕ್ವಾಲಾಲಂಪುರ: 2020ರ ವಿಶ್ವಕಪ್‌ ಫುಟ್‌ಬಾಲ್‌ಗೆಏಷ್ಯಾ ತಂಡಗಳ ಎರಡನೇ ಅರ್ಹತಾ ಸುತ್ತಿನ ಟೂರ್ನಿಗೆ ಭಾರತ ತಂಡ ಸುಲಭ ಸ್ಪರ್ಧೆಯಿರುವ ಗುಂಪಿನಲ್ಲಿ ಸ್ಥಾನ ಪಡೆದಿದೆ. ಕತರ್‌, ಒಮನ್‌, ಅಫ್ಗಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳಿರುವ ‘ಇ’ ಗುಂಪಿನಲ್ಲಿ ಭಾರತ ಸೇರಿದೆ.

ಇಲ್ಲಿಯ ಏಷ್ಯನ್‌ ಫುಟ್‌ಬಾಲ್‌ ಕಾನ್ಫಡರೇಷನ್‌ ಮುಖ್ಯಕಚೇರಿಯಲ್ಲಿ ಡ್ರಾ ಪ್ರಕ್ರಿಯೆ ನಡೆಯಿತು. ಏಷ್ಯಾದ 40 ದೇಶಗಳನ್ನು ಪ್ರತಿ ಐದು ತಂಡಗಳ ಎಂಟು ಗುಂಪುಗಳಾಗಿ ವಿಂಗಡಿಸಲಾಗಿದೆ.

ಎಲ್ಲ ತಂಡಗಳು ಸೆಪ್ಟೆಂಬರ್‌ 5ರಿಂದ ನಡೆಯುವ ಟೂರ್ನಿಯಲ್ಲಿ ತವರು ಹಾಗೂ ಹೊರಗಿನ ಕ್ರೀಡಾಂಗಣಗಳಲ್ಲಿರೌಂಡ್‌ ರಾಬಿನ್‌ ಮಾದರಿಯ ಪಂದ್ಯಗಳನ್ನು ಆಡಲಿವೆ.ಎಂಟು ಗುಂಪುಗಳಲ್ಲಿ ಅಗಸ್ಥಾನ ಪಡೆಯುವ ಮತ್ತು ನಾಲ್ಕು ಶ್ರೇಷ್ಠ ರನ್ನರ್‌ಅಪ್‌ ತಂಡಗಳು 2022ರ ವಿಶ್ವಕಪ್‌ ಅರ್ಹತಾ ಟೂರ್ನಿಯ ಅಂತಿಮ ಸುತ್ತಿಗೆ ಹಾಗೂ 2023ರ ಎಎಫ್‌ಸಿ ಏಷ್ಯಾ ಕಪ್‌ ಫೈನಲ್‌ಗೆ ಅರ್ಹತೆ ಗಳಿಸಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.