ADVERTISEMENT

ಫುಟ್‌ಬಾಲ್‌: ಭಾರತಕ್ಕೆ ತುರ್ಕಮೆನಿಸ್ತಾನ ಸವಾಲು

ಎಎಫ್‌ಸಿ 16 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ ಅರ್ಹತಾ ಟೂರ್ನಿ

ಪಿಟಿಐ
Published 17 ಸೆಪ್ಟೆಂಬರ್ 2019, 19:45 IST
Last Updated 17 ಸೆಪ್ಟೆಂಬರ್ 2019, 19:45 IST
   

ತಾಷ್ಕೆಂಟ್‌: ಭಾರತ 16 ವರ್ಷದೊಳಗಿನವರ ಫುಟ್‌ಬಾಲ್‌ ತಂಡ ಬುಧವಾರ ಎಎಫ್‌ಸಿ–2020 ಚಾಂಪಿಯನ್‌ಷಿಪ್‌ನ ಅರ್ಹತಾ ಪಂದ್ಯದಲ್ಲಿ ತುರ್ಕಮೆನಿಸ್ತಾನದ ಸವಾಲು ಎದುರಿಸಲಿದೆ.

ತುರ್ಕಮೆನಿಸ್ತಾನ, ಬಹ್ರೇನ್‌ ಹಾಗೂ ಆತಿಥೇಯ ಉಜ್ಬೇಕಿಸ್ತಾನ ತಂಡಗಳಿರುವ ‘ಬಿ’ ಗುಂಪಿನಲ್ಲಿ ಭಾರತ ಸ್ಥಾನ ಪಡೆದಿದೆ.

‘ಎಎಫ್‌ಸಿ ಅರ್ಹತಾ ಟೂರ್ನಿಯಲ್ಲಿ ತೀವ್ರ ಸ್ಪರ್ಧೆ ಇರುವ ಗುಂಪಿನಲ್ಲಿ ’ಬಿ’ ಗುಂಪು ಒಂದು. ಸ್ಪರ್ಧೆಗೆ ಕಠಿಣ ತಯಾರಿ ನಡೆಸಿದ್ದೇವೆ. ನಿರೀಕ್ಷಿಸಿದಂತೆ ಫಲಿತಾಂಶ ಪಡೆಯಲು ಯಾವ ತಂಡಕ್ಕೂ ಸಾಧ್ಯವಿಲ್ಲ. ನಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದರೆ ಮುನ್ನಡೆಯಲು ಸಾಧ್ಯ’ ಎಂದು ಭಾರತ ತಂಡದ ಕೋಚ್‌ ಬಿಬಿಯಾನೊ ಫರ್ನಾಂಡಿಸ್‌ ಹೇಳಿದ್ದಾರೆ.

ADVERTISEMENT

‘ತುರ್ಕಮೆನಿಸ್ತಾನ ಬಲಿಷ್ಠ ಎದುರಾಳಿ. ಆದರೆ ನಾವು ನಮ್ಮದೇ ಆದ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಅವುಗಳನ್ನು ಸೂಕ್ತವಾಗಿ ಕ್ರಿಯಾರೂಪಕ್ಕೆ ತಂದರೆ ತಂಡ ಗೆಲ್ಲುವ ಸಾಧ್ಯತೆಯಿದೆ’ ಎಂದು ಫರ್ನಾಂಡಿಸ್‌ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.