ADVERTISEMENT

ಭಾರತ–ವಿಯೆಟ್ನಾಂ ಸೌಹಾರ್ದ ಫುಟ್‌ಬಾಲ್‌ ಪಂದ್ಯ

ಪಿಟಿಐ
Published 10 ಅಕ್ಟೋಬರ್ 2019, 14:15 IST
Last Updated 10 ಅಕ್ಟೋಬರ್ 2019, 14:15 IST

ನವದೆಹಲಿ: ಭಾರತದ ಮಹಿಳಾ ಫುಟ್‌ಬಾಲ್‌ ತಂಡದವರು ಮುಂದಿನ ತಿಂಗಳು ವಿಯೆಟ್ನಾಂ ವಿರುದ್ಧ ಎರಡು ಸೌಹಾರ್ದ ಪಂದ್ಯಗಳನ್ನು ಆಡಲಿದ್ದಾರೆ.

ನವೆಂಬರ್‌ 3 ಮತ್ತು 6ರಂದು ವಿಯೆಟ್ನಾಂ ಯೂತ್‌ ಫುಟ್‌ಬಾಲ್‌ ತರಬೇತಿ ಕೇಂದ್ರದಲ್ಲಿ ಪಂದ್ಯಗಳು ನಡೆಯಲಿವೆ.

ಸ್ಪೇನ್‌ ಮತ್ತು ಉಜ್ಬೇಕಿಸ್ತಾನ ಪ್ರವಾಸಗಳಲ್ಲಿ ಉತ್ತಮ ಸಾಮರ್ಥ್ಯ ತೋರಿರುವ ಭಾರತದ ವನಿತೆಯರು, ವಿಶ್ವ ರ‍್ಯಾಂಕಿಂಗ್‌ನಲ್ಲಿ 34ನೇ ಸ್ಥಾನದಲ್ಲಿರುವ ವಿಯೆಟ್ನಾಂ ವಿರುದ್ಧವೂ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.

ADVERTISEMENT

ವಿಯೆಟ್ನಾಂ ಪ್ರವಾಸಕ್ಕೂ ಮುನ್ನ ಭಾರತ ತಂಡದವರು ಇದೇ ತಿಂಗಳ 25ರಿಂದ 30ರವರೆಗೆ ನವದೆಹಲಿಯಲ್ಲಿ ನಡೆಯುವ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ಗುರುವಾರ 29 ಸದಸ್ಯರ ತಂಡವನ್ನು ಪ್ರಕಟಿಸಲಾಗಿದೆ.

ತಂಡ ಇಂತಿದೆ: ಗೋಲ್‌ಕೀಪರ್‌ಗಳು: ಅದಿತಿ ಚೌಹಾಣ್‌, ಎಲಂಗ್‌ಬಮ್‌ ಚಾನು, ಮಯಿಬಮ್‌ ಲಿಂಥೊಯಿಂಗಾಂಬಿ ದೇವಿ ಮತ್ತು ಎನ್‌.ಸೌಮ್ಯಾ.

ಡಿಫೆಂಡರ್‌ಗಳು: ಆರತಿ ಅನಿಮಾ ಖಾಡಿಯಾ, ಜಾಬಮಣಿ ತುಡು, ಆಶಾಲತಾ ದೇವಿ, ಮೈಕೆಲ್‌ ಕಾಸ್ಟಾನ್ಹ, ಸ್ವೀಟಿ ದೇವಿ, ಪ್ರತೀಕ್ಷಾ ಲಾಕ್ರಾ, ಸೊರೊಖಾಯಿಬಮ್‌ ರಂಜನಾ ಚಾನು ಮತ್ತು ಡಬ್ಲ್ಯು.ಲಿಂತೊಯಿಂಗಾಂಬಿ ದೇವಿ.

ಮಿಡ್‌ಫೀಲ್ಡರ್‌ಗಳು: ಅಸೆಮ್‌ ರೋಜಾ ದೇವಿ, ಗ್ರೇಸ್‌ ಲಾಲ್ರಂಪರಿ, ಎ.ಕಾರ್ತಿಕಾ, ಮನೀಷಾ, ನೊಂಗಮತೆಮ್‌ ರತನಬಾಲಾ ದೇವಿ, ರಿತು ರಾಣಿ, ಸಂಗೀತಾ ಬಸಫೋರ್‌, ಸಂಜು ಯಾದವ್‌, ಸೋನಿ ಬೆಹೆರಾ ಮತ್ತು ಸುಮಿತ್ರಾ ಕಾಮರಾಜ್‌.

ಫಾರ್ವರ್ಡ್‌ಗಳು: ಅಂಜು ತಮಂಗ್‌, ದಂಗ್‌ಮೀ ಗ್ರೇಸ್‌, ದಯಾ ದೇವಿ, ಕರೀಷ್ಮಾ ಪಿ.ಶಿರ್ವೋಯಿಕರ್‌, ಬಾಲಾ ದೇವಿ, ರೇಣು ಮತ್ತು ಶಾರದಾ ಕುಮಾರಿ.

ಮುಖ್ಯ ಕೋಚ್‌: ಮೆಮೋಲ್‌ ರಾಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.