ಫುಟ್‌ಬಾಲ್
ಜಮ್ಷೆಡ್‌ಪುರ: ಭಾರತೀಯ ಸೇನೆ ತಂಡವು ಡುರಾಂಡ್ ಕಪ್ ಫುಟ್‌ಬಾಲ್ ಟೂರ್ನಿ ‘ಸಿ’ ಗುಂಪಿನ ಪಂದ್ಯದಲ್ಲಿ ಮಂಗಳವಾರ ನೇಪಾಳದ ತ್ರಿಭುವನ್ ಆರ್ಮಿ ಎಫ್‌ಸಿ ತಂಡವನ್ನು 1–0 ಗೋಲಿನಿಂದ ಸೋಲಿಸಿತು.
ಪಿ.ಕ್ರೋಸ್ಟೋಫರ್ ಕೇಮಿ ಅವರು 21ನೇ ನಿಮಿಷ ನಿರ್ಣಾಯಕ ಗೋಲು ಗಳಿಸಿದರು. ಪಂದ್ಯದ 29ನೇ ನಿಮಿಷ ನೇಪಾಳದ ಗೋಲ್‌ನತ್ತ ಮುನ್ನುಗ್ಗುತ್ತಿದ್ದ ಭಾರತೀಯ ಸೇನೆ ತಂಡದ ಫಾರ್ವರ್ಡ್ ಆಟಗಾರ ಲಿಟೊನ್ ಶಿಲ್ ಅವರನ್ನು ಪೆನಾಲ್ಟಿ ಬಾಕ್ಸ್ ಹೊರಗಡೆ ಅಪಾಯಕಾರಿಯಾಗಿ ತಡೆದಿದ್ದಕ್ಕೆ ಎದುರಾಳಿ ಗೋಲ್ ಕೀಪರ್ ವಿಕಾಸ್ ಕುತು ಅವರಿಗೆ ಕೆಂಪು ಕಾರ್ಡ್ ತೋರಿಸಿ ಹೊರಕಳಿಸಲಾಯಿತು. ಹೀಗಾಗಿ ತ್ರಿಭುವನ್ ಆರ್ಮಿ ತಂಡ ಉಳಿದ ಅವಧಿಗೆ 10 ಮಂದಿಗೆ ಸೀಮಿತಗೊಂಡು ಆಡಬೇಕಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.