ADVERTISEMENT

ರಾಜ್ಯ ಫುಟ್‌ಬಾಲ್ ಸಂಸ್ಥೆಯ ಅಧ್ಯಕ್ಷರಾಗಿ ಎನ್.ಎ. ಹ್ಯಾರಿಸ್ ನೇಮಕ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2019, 20:22 IST
Last Updated 25 ಆಗಸ್ಟ್ 2019, 20:22 IST
ಎನ್.ಎ. ಹ್ಯಾರಿಸ್
ಎನ್.ಎ. ಹ್ಯಾರಿಸ್   

ಬೆಂಗಳೂರು: ಎನ್.ಎ. ಹ್ಯಾರಿಸ್ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ (ಕೆಎಸ್‌ಎಫ್‌ಎ) ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.

ಭಾನುವಾರ ನಡೆದ ಸಂಸ್ಥೆಯ ಸರ್ವ ಸಾಮಾನ್ಯ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಇವರು 2023ರವರೆಗೆ ಕಾರ್ಯನಿರ್ವಹಿಸುವರು.

ಪದಾಧಿಕಾರಿಗಳು: ಎನ್. ಎ. ಹ್ಯಾರಿಸ್ (ಅಧ್ಯಕ್ಷ), ಕೆ. ಗೋವಿಂದರಾಜ್, ಎಂ.ಪಿ. ಸ್ವಾಮಿ, ಹನೀಫ್ ಮೊಹಮ್ಮದ್, ಪಿ.ಕೆ. ಜಗದೀಶ್, ಟಿ. ಪುಟ್ಟರಾಜು (ಉಪಾಧ್ಯಕ್ಷರು), ಎಂ. ಸತ್ಯನಾರಾಯಣ, ಅಸ್ಲಂ ಖಾನ್, ಶಕೀಲ್ ಅಬ್ದುಲ್ ರೆಹಮಾನ್, ಬಿ.ಕೆ. ಮುನಿರಾಜ್ (ಕಾರ್ಯದರ್ಶಿಗಳು), ಎಂ. ಕುಮಾರ್ (ಖಜಾಂಚಿ).

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.