ADVERTISEMENT

ಪುಟ್‌ಬಾಲ್‌: ಮಾತೃ ಪ್ರತಿಷ್ಠಾನ ಎಫ್‌ಸಿಗೆ ಜಯ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 16:13 IST
Last Updated 12 ಆಗಸ್ಟ್ 2024, 16:13 IST
ಫುಟ್‌ಬಾಲ್‌
ಫುಟ್‌ಬಾಲ್‌   

ಬೆಂಗಳೂರು: ಮಾತೃ ಪ್ರತಿಷ್ಠಾನ ಫುಟ್‌ಬಾಲ್ ಕ್ಲಬ್ ತಂಡವು ಸೋಮವಾರ ನಡೆದ ಇಂಡಿಯನ್ ವುಮೆನ್ಸ್ ಲೀಗ್ (ಐಡಬ್ಲ್ಯುಎಲ್) ಟೂರ್ನಿಯ ಪಂದ್ಯದಲ್ಲಿ ಜಯಿಸಿತು.

ಅಶೋಕನಗರದ ಕರ್ನಾಟಕ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮಾತೃ ಪ್ರತಿಷ್ಠಾನ ತಂಡವು 2–0ಯಿಂದ ಮಿಸಾಕಾ ಫುಟ್‌ಬಾಲ್‌ ಕ್ಲಬ್‌ ತಂಡದ ವಿರುದ್ಧ ಗೆದ್ದಿತು.

ಮಾತೃ ಪ್ರತಿಷ್ಠಾನ ತಂಡದ ಪ್ರೀತಿ (28ನೇ ಮತ್ತು 67ನೇ ನಿ) ಎರಡು ಗೋಲು ದಾಖಲಿಸಿದರು.

ADVERTISEMENT

ರೆಬೆಲ್‌ ವುಮೆನ್ಸ್‌ ಫುಟ್‌ಬಾಲ್‌ ಕ್ಲಬ್‌ ಮತ್ತು ಯುನೈಟೆಡ್‌ ಫುಟ್‌ಬಾಲ್‌ ಕ್ಲಬ್‌ ಕೊಡಗು ತಂಡದ ನಡುವೆ ನಡೆದ ದಿನದ ಮತ್ತೊಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು.

ರೆಬೆಲ್ಸ್‌ ತಂಡದ ಸೆನೊರಿಟಾ ನೊಂಗ್‌ಫ್ಲು (23ನೇ ಮತ್ತು 63ನೇ ನಿ) ಎರಡು ಗೋಲು ದಾಖಲಿಸಿದರು.  ಯುನೈಟೆಡ್‌ ಎಫ್‌ಸಿ ಪರ ಆಯುಷ್‌ ಮಾಲ್ವಿ(23ನೇ ನಿ) ಮತ್ತು ದಿವ್ಯಾ ರಾಣಾ (93ನೇ ನಿ) ತಲಾ ಒಂದು ಗೋಲು ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.