ಸೌತ್ ಯುನೈಟೆಡ್ ಎಫ್‌ಸಿ ತಂಡದ ಹುಜಾಫ ಅಹ್ಮದ್ ದಾರ್ (ಕೇಸರಿ) ಮತ್ತು ಎಂಎಫ್‌ಎಆರ್ ಸ್ಟೂಡೆಂಟ್ಸ್ ಯೂನಿಯನ್ ಎಫ್‌ಸಿ ತಂಡದ ರಕ್ಷಿತ್ ಅವರೊಂದಿಗೆ ಚೆಂಡಿಗಾಗಿ ಸೆಣಸಾಟ ನಡೆಸಿದರು
–ಪ್ರಜಾವಾಣಿ ಚಿತ್ರ: ಬಿ.ಕೆ. ಜನಾರ್ದನ
ಬೆಂಗಳೂರು: ಸೌತ್ ಯುನೈಟೆಡ್ ಎಫ್‌ಸಿ ತಂಡವು ಕೆಎಸ್‌ಎಫ್‌ಎ ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 3–1 ಗೋಲುಗಳಿಂದ ಎಂಎಫ್‌ಎಆರ್ ಸ್ಟೂಡೆಂಟ್ಸ್ ಯೂನಿಯನ್ ಎಫ್‌ಸಿ ತಂಡವನ್ನು ಮಣಿಸಿತು.
ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಯುನೈಟೆಡ್ ಪರ ಮಕಕ್‌ಮಯುಮ್ ದನಿಯಲ್ (1ನೇ ಮತ್ತು 90+2ನೇ ನಿ) ಮತ್ತು ಮೊಹಮ್ಮದ್ ಕೈಫ್ (69ನೇ) ಗೋಲು ಗಳಿಸಿದರು. ಎಂಎಫ್‌ಎಆರ್ ಪರ ಏಕೈಕ ಗೋಲನ್ನು ಅಮೀನ್ ಖಜೀರ್ (53ನೇ) ದಾಖಲಿಸಿದರು.
ಎಚ್‌ಎಎಲ್ ಎಫ್‌ಸಿ ತಂಡವು 1–0ಯಿಂದ ಭಾರತ್ ಬೆಂಗಳೂರು ಎಫ್‌ಸಿ ತಂಡವನ್ನು ಸೋಲಿಸಿತು. ಅಥರ್ ಇರ್ಷಾದ್ (20ನೇ) ಎಚ್‌ಎಎಲ್ ಪರ ಗೋಲು ತಂದಿತ್ತರು. ಮತ್ತೊಂದು ಪಂದ್ಯದಲ್ಲಿ ಕೊಡಗು ಎಫ್‌ಸಿ ತಂಡವು ಸ್ಪೋರ್ಟಿಂಗ್ ಕ್ಲಬ್ ಬೆಂಗಳೂರು ಜೊತೆ ಗೋಲುರಹಿತವಾಗಿ ಡ್ರಾ ಮಾಡಿಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.