ADVERTISEMENT

ಫುಟ್‌ಬಾಲ್‌: ಯುನೈಟೆಡ್‌ ಸ್ಟಾರ್ಸ್‌ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 16:22 IST
Last Updated 22 ಸೆಪ್ಟೆಂಬರ್ 2025, 16:22 IST
<div class="paragraphs"><p>ಯುನೈಟೆಡ್‌ ಸ್ಟಾರ್ಸ್‌ ಎಫ್‌ಸಿ ತಂಡದ ಆ್ಯಬಿ ಎಸ್‌. (ಎಡ) ಹಾಗೂ ಎಂಇಜಿ ಆ್ಯಂಡ್ ಸೆಂಟರ್‌ ಎಫ್‌ಸಿ ತಂಡದ ಹೆಂಗೌಲಲ್‌ ಕಿಪ್‌ಜೆನ್‌ ಅವರು ಚೆಂಡಿಗಾಗಿ ಪೈಪೋಟಿ ನಡೆಸಿದರು –</p></div>

ಯುನೈಟೆಡ್‌ ಸ್ಟಾರ್ಸ್‌ ಎಫ್‌ಸಿ ತಂಡದ ಆ್ಯಬಿ ಎಸ್‌. (ಎಡ) ಹಾಗೂ ಎಂಇಜಿ ಆ್ಯಂಡ್ ಸೆಂಟರ್‌ ಎಫ್‌ಸಿ ತಂಡದ ಹೆಂಗೌಲಲ್‌ ಕಿಪ್‌ಜೆನ್‌ ಅವರು ಚೆಂಡಿಗಾಗಿ ಪೈಪೋಟಿ ನಡೆಸಿದರು –

   

ಪ್ರಜಾವಾಣಿ ಚಿತ್ರ: ಪುಷ್ಕರ್‌.ವಿ.

ಬೆಂಗಳೂರು: ರಜಿಲ್‌ ಸಾಜಿ (58ನೇ ನಿ.) ಹಾಗೂ ಡಿಮಾರ್ಕ್‌ ಅಂಥೋನಿ (86ನೇ ನಿ.) ಅವರ ಗೋಲಿನ ನೆರವಿನಿಂದ ಯುನೈಟೆಡ್‌ ಸ್ಟಾರ್ಸ್‌ ಫುಟ್‌ಬಾಲ್‌ ಕ್ಲಬ್‌ ತಂಡವು ಕೆಎಸ್‌ಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನ ‍ಪಂದ್ಯದಲ್ಲಿ 2–1ರಿಂದ ಎಂಇಜಿ ಆ್ಯಂಡ್ ಸೆಂಟರ್‌ ಎಫ್‌ಸಿ ತಂಡವನ್ನು ಸೋಲಿಸಿತು.

ADVERTISEMENT

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಎಂಇಜಿ ತಂಡವು ರೋಹಿತ್‌ (51ನೇ ನಿ.) ಅವರ ಗೋಲಿನ ನೆರವಿನಿಂದ ಆರಂಭಿಕ ಮುನ್ನಡೆ ಗಳಿಸಿತ್ತು. ದ್ವಿತೀಯಾರ್ಧದಲ್ಲಿ ಪುಟಿದೆದ್ದ ಯುನೈಟೆಡ್‌ ಆಟಗಾರರು ಜಯಿಸಿದರು.

ಮತ್ತೊಂದು ಪಂದ್ಯದಲ್ಲಿ ಪರಿಕ್ರಮ ಎಫ್‌ಸಿ ತಂಡ ಹಾಗೂ ಬಿಎಫ್‌ಸಿ ತಂಡಗಳು 1–1ರಿಂದ ಸಮಬಲ ಸಾಧಿಸಿದವು. ಪರಿಕ್ರಮ ಎಫ್‌ಸಿ ಪರ ಮಂಗ್ಲೆಂಥಂಗ್‌ ಸಿಂಗ್‌ (22ನೇ ನಿ.) ಹಾಗೂ ಬಿಎಫ್‌ಸಿ ಪರ ಸಿ. ರೋಹನ್‌ ಸಿಂಗ್‌ (5ನೇ ನಿ.) ತಲಾ ಒಂದು ಗೋಲು ದಾಖಲಿಸಿದರು.

ಇನ್ನೊಂದು ಪಂದ್ಯದಲ್ಲಿ ಎಫ್‌ಸಿ ಅಗ್ನಿಪುತ್ರ ತಂಡವು 4–0ಯಿಂದ ಭಾರತ್‌ ಬೆಂಗಳೂರು ತಂಡದ ವಿರುದ್ಧ ಸುಲಭ ಜಯ ದಾಖಲಿಸಿತು. ಅಗ್ನಿಪುತ್ರ ತಂಡದ ಆರ್ಯನ್‌ ಆಮ್ಲಾ (5ನೇ ನಿ.), ಅಫ್ಜರ್‌ ನೂರಾನಿ (35ನೇ ನಿ.), ಅಹಮದ್‌ ಫೈಜ್‌ ಖಾನ್‌ (37ನೇ ನಿ.) ಹಾಗೂ ಉನೀಸ್‌ ಕೆ. (89ನೇ ನಿ.) ತಲಾ ಒಂದು ಗೋಲು ದಾಖಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.