ADVERTISEMENT

ಕಿಕ್‌ಸ್ಟಾರ್ಟ್‌ ಎಫ್‌ಸಿಗೆ ಜಯ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 16:09 IST
Last Updated 15 ಅಕ್ಟೋಬರ್ 2025, 16:09 IST
ಎಫ್‌ಸಿ ಅಗ್ನಿಪುತ್ರ ತಂಡದ ಮ್ಯಾಕ್ಸಿಮಿನಸ್‌ ದಾಂಗ್‌ಮೈ (ಎಡ) ಹಾಗೂ ಎಫ್‌ಸಿ ರಿಯಲ್‌ ಬೆಂಗಳೂರು ತಂಡದ ಎ.ವೈಶಾಕ್‌ ಅವರು ಚೆಂಡಿಗಾಗಿ ಜಿದ್ದಾಜಿದ್ದಿ ನಡೆಸಿದರು –ಪ್ರಜಾವಾಣಿ ಚಿತ್ರ: ಬಿ.ಕೆ.ಜನಾರ್ದನ
ಎಫ್‌ಸಿ ಅಗ್ನಿಪುತ್ರ ತಂಡದ ಮ್ಯಾಕ್ಸಿಮಿನಸ್‌ ದಾಂಗ್‌ಮೈ (ಎಡ) ಹಾಗೂ ಎಫ್‌ಸಿ ರಿಯಲ್‌ ಬೆಂಗಳೂರು ತಂಡದ ಎ.ವೈಶಾಕ್‌ ಅವರು ಚೆಂಡಿಗಾಗಿ ಜಿದ್ದಾಜಿದ್ದಿ ನಡೆಸಿದರು –ಪ್ರಜಾವಾಣಿ ಚಿತ್ರ: ಬಿ.ಕೆ.ಜನಾರ್ದನ   

ಬೆಂಗಳೂರು: ಡಾನ್‌ ಕಾರ್ಲೋಸ್‌ (17ನೇ ನಿ.) ಅವರ ಗೋಲಿನ ನೆರವಿನಿಂದ ಕಿಕ್‌ಸ್ಟಾರ್ಟ್‌ ಫುಟ್‌ಬಾಲ್‌ ಕ್ಲಬ್‌ ತಂಡವು ಕೆಎಸ್‌ಎಫ್‌ಎ ಸೂಪರ್ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಬುಧವಾರ 1–0ಯಿಂದ ಬೆಂಗಳೂರು ಸಿಟಿ ಎಫ್‌ಸಿ ತಂಡವನ್ನು ಮಣಿಸಿತು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕಾರ್ಲೋಸ್‌ ಅವರು ಮೊದಲ ಕ್ವಾರ್ಟರ್‌ನಲ್ಲಿ ಗೋಲು ಗಳಿಸಿ ಕಿಕ್‌ಸ್ಟಾರ್ಟ್‌ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ನಂತರ ರಕ್ಷಣಾತ್ಮಕ ಆಟವಾಡಿದ ಕಿಕ್‌ಸ್ಟಾರ್ಟ್‌ ಆಟಗಾರರು, ಎದುರಾಳಿ ತಂಡದ ಆಟಗಾರರಿಗೆ ಗೋಲು ಗಳಿಸಲು ಅವಕಾಶ ನೀಡದೆ ಜಯ ತಮ್ಮದಾಗಿಸಿಕೊಂಡರು.

ಇನ್ನೊಂದು ಪಂದ್ಯದಲ್ಲಿ ಎಫ್‌ಸಿ ಅಗ್ನಿಪುತ್ರ ಹಾಗೂ ಎಫ್‌ಸಿ ರಿಯಲ್‌ ಬೆಂಗಳೂರು ತಂಡಗಳು 2–2ರಿಂದ ಸಮಬಲ ಸಾಧಿಸಿದವು. ಅಗ್ನಿಪುತ್ರ ತಂಡದ ಅಝರ್‌ಫರ್‌ ನೂರಾನಿ (51ನೇ ನಿ.) ಹಾಗೂ ಎಸ್‌.ಎಂ. ಇಕ್ಬಾಲ್‌ ಹುಸೇನ್‌ (90+2ನೇ ನಿ.) ತಲಾ ಒಂದು ಗೋಲು ಹೊಡೆದರು. ರಿಯಲ್‌ ಬೆಂಗಳೂರು ತಂಡದ ಅಜಯ್‌ ಅಲೆಕ್ಸ್‌ ಅಂಥೋನಿ (49ನೇ ನಿ.) ಹಾಗೂ ಸಯ್ಯದ್‌ ಅಹಮ್ಮದ್‌ (58ನೇ ನಿ.) ತಲಾ ಒಮ್ಮೆ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು.

ADVERTISEMENT

ಎಎಸ್‌ಸಿ ಆ್ಯಂಡ್‌ ಸೆಂಟರ್‌ ಎಫ್‌ಸಿ ಹಾಗೂ ಯುನೈಟೆಡ್‌ ಸ್ಟಾರ್ಸ್‌ ಎಫ್‌ಸಿ ನಡುವಣ ಪಂದ್ಯವು ಗೋಲು ರಹಿತ ಡ್ರಾ ಆಯಿತು.

ಎಫ್‌ಸಿ ಅಗ್ನಿಪುತ್ರ ತಂಡದ ಗೋಲ್‌ಕೀಪರ್‌ ಸ್ಯಾಮ್‌ ಜಾರ್ಜ್‌ (ಎಡ) ಅವರು ಚೆಂಡು ಹಿಡಿಯಲು ಯತ್ನಿಸಿದರು –ಪ್ರಜಾವಾಣಿ ಚಿತ್ರ: ಬಿ.ಕೆ.ಜನಾರ್ದನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.