ADVERTISEMENT

ಫುಟ್‌ಬಾಲ್‌: ಸ್ಟೂಡೆಂಟ್ಸ್‌ ಯೂನಿಯನ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 15:33 IST
Last Updated 22 ಅಕ್ಟೋಬರ್ 2018, 15:33 IST
ಸ್ಟೂಡೆಂಟ್ಸ್‌ ಯೂನಿಯನ್‌ ತಂಡದ ಎಮಾನುಯೆಲ್‌ (ಎಡ) ಮತ್ತು ಸಿಐಎಲ್‌ ತಂಡದ ಎಂ.ವಿಜಯ ಪ್ರಭಾಕರ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪೈಪೋಟಿ ನಡೆಸಿದರು –ಪ್ರಜಾವಾಣಿ ಚಿತ್ರ/ ಬಿ.ಕೆ.ಜನಾರ್ಧನ್‌
ಸ್ಟೂಡೆಂಟ್ಸ್‌ ಯೂನಿಯನ್‌ ತಂಡದ ಎಮಾನುಯೆಲ್‌ (ಎಡ) ಮತ್ತು ಸಿಐಎಲ್‌ ತಂಡದ ಎಂ.ವಿಜಯ ಪ್ರಭಾಕರ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪೈಪೋಟಿ ನಡೆಸಿದರು –ಪ್ರಜಾವಾಣಿ ಚಿತ್ರ/ ಬಿ.ಕೆ.ಜನಾರ್ಧನ್‌   

ಬೆಂಗಳೂರು: ಎಮಾನುಯೆಲ್‌ ಕಾಲ್ಚಳಕದಲ್ಲಿ ಅರಳಿದ ಎರಡು ಗೋಲುಗಳ ಬಲದಿಂದ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ಸೂಪರ್‌ ಡಿವಿಷನ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಗೆದ್ದಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪೈಪೋಟಿಯಲ್ಲಿ ಸ್ಟೂಡೆಂಟ್ಸ್‌ ಯೂನಿಯನ್‌ 3–0 ಗೋಲುಗಳಿಂದ ಸಿಐಎಲ್‌ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು.

ಆರಂಭದಿಂದಲೇ ಚುರುಕಿನ ಆಟಕ್ಕೆ ಮುಂದಾದ ಸ್ಟೂಡೆಂಟ್ಸ್‌ ತಂಡ 33ನೇ ನಿಮಿಷದಲ್ಲಿ ಖಾತೆ ತೆರೆಯಿತು. ಎಮಾನುಯೆಲ್‌ ಗೋಲು ಗಳಿಸಿದರು.

ADVERTISEMENT

75ನೇ ನಿಮಿಷದಲ್ಲಿ ಮತ್ತೊಮ್ಮೆ ಮೋಡಿ ಮಾಡಿದ ಎಮಾನುಯೆಲ್‌ 2–0ರ ಮುನ್ನಡೆಗೆ ಕಾರಣರಾದರು. 81ನೇ ನಿಮಿಷದಲ್ಲಿ ಅಂಕಿತ್‌ ಚೆಂಡನ್ನು ಗುರಿ ಮುಟ್ಟಿಸಿ ಗೆಲುವಿನ ಹಾದಿ ಸುಗಮ ಮಾಡಿದರು.

ಎಜಿಒಆರ್‌ಸಿ ಎಫ್‌ಸಿಗೆ ಜಯ: ‘ಎ’ ಡಿವಿಷನ್‌ ಲೀಗ್‌ನ ಪಂದ್ಯದಲ್ಲಿ ಎಜಿಒಆರ್‌ಸಿ ಎಫ್‌ಸಿ ತಂಡ ಗೆದ್ದಿತು.

ಎಜಿಒಆರ್‌ಸಿ 2–0 ಗೋಲುಗಳಿಂದ ಆರ್‌ಡಬ್ಲ್ಯುಎಫ್‌ ಎಫ್‌ಸಿ ಸವಾಲು ಮೀರಿತು.

ವಿಜಯೀ ತಂಡದ ಎನ್‌.ಎಸ್‌.ಮಂಜು ಮತ್ತು ಪ್ರದೀಪ್‌ ಕುಮಾರ್‌ ಕ್ರಮವಾಗಿ 53 ಮತ್ತು 75ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.