ADVERTISEMENT

ಫುಟ್‌ಬಾಲ್‌: ಎಂಇಜಿ–ಸೆಂಟರ್ ಎಫ್‌ಸಿಗೆ ಗೆಲುವು

ಪ್ರಜಾವಾಣಿ ಚಿತ್ರ
Published 17 ನವೆಂಬರ್ 2021, 13:26 IST
Last Updated 17 ನವೆಂಬರ್ 2021, 13:26 IST
ಎಂಇಜಿಯ ಶೇಕ್ ಮುಜೀಬ್ (ಬಲ) ಬೆಂಗಳೂರು ಯುನೈಟೆಡ್ ಎಫ್‌ಸಿಯ ಗೋವರ್ಧನ್ ದಾಸ್ ಅವರಿಂದ ಚೆಂಡು ಕಸಿದುಕೊಂಡು ಮುನ್ನುಗ್ಗಿದರು –ಪ್ರಜಾವಾಣಿ ಚಿತ್ರ
ಎಂಇಜಿಯ ಶೇಕ್ ಮುಜೀಬ್ (ಬಲ) ಬೆಂಗಳೂರು ಯುನೈಟೆಡ್ ಎಫ್‌ಸಿಯ ಗೋವರ್ಧನ್ ದಾಸ್ ಅವರಿಂದ ಚೆಂಡು ಕಸಿದುಕೊಂಡು ಮುನ್ನುಗ್ಗಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಎದುರಾಳಿಗಳ ಸವಾಲನ್ನು ದಿಟ್ಟವಾಗಿ ಎದುರಿಸಿದ ಎಂಇಜಿ–ಸೆಂಟರ್ ಎಫ್‌ಸಿ ತಂಡ ಕೆಎಸ್‌ಎಫ್‌ಎ ಮತ್ತು ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ ಆಯೋಜಿಸಿರುವ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಭರ್ಜರಿ ಜಯ ಗಳಿಸಿತು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಹಣಾಹಣಿಯಲ್ಲಿ ಎಂಇಜಿ ತಂಡ 2–1ರಲ್ಲಿ ಬೆಂಗಳೂರು ಯುನೈಟೆಡ್ ಎಫ್‌ಸಿಯನ್ನು ಮಣಿಸಿತು.

25ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಶೇಕ್ ಮುಜೀಬ್ ಅವರು ಎಂಇಜಿಯ ಖಾತೆ ತೆರೆದರು. 45ನೇ ನಿಮಿಷದಲ್ಲಿ ಅರ್ಜುನ್ ಮಧು ಗಳಿಸಿದ ಗೋಲಿನೊಂದಿಗೆ ತಂಡದ ಮುನ್ನಡೆ ಹೆಚ್ಚಿತು. ಬೆಂಗಳೂರು ಯುನೈಟೆಡ್‌ ಪರ ವ್ಯಾಲೆಂಟೈನ್ ಒಡಿನಾಂಬ 61ನೇ ನಿಮಿಷದಲ್ಲಿ ಗೋಲು ಗಳಿಸಿ ಸೋಲಿನ ಅಂತರ ಕಡಿಮೆ ಮಾಡಿದರು.

ADVERTISEMENT

ಗುರುವಾರ 1.45ಕ್ಕೆ ಎಫ್‌ಸಿ ಡೆಕ್ಕನ್ ಮತ್ತು ಎಎಸ್‌ಸಿ–ಸೆಂಟರ್ ಎಫ್‌ಸಿ ತಂಡಗಳ ನಡುವೆ ಪಂದ್ಯ ನಡೆಯಲಿದ್ದು 3.45ಕ್ಕೆ ಎಡಿಇ ಎಫ್‌ಸಿ ಮತ್ತು ಜವಾಹರ್ ಯೂನಿಯನ್ ಎಫ್‌ಸಿ ತಂಡಗಳು ಸೆಣಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.