ಬೆಂಗಳೂರು: ಮೇಘಾಲಯದ ನಾನ್‌ಗಿರಿ ಪ್ರೆಸ್‌ಬಿಟೇರಿಯನ್ ಸೆಕೆಂಡರಿ ಸ್ಕೂಲ್ ತಂಡವು 63ನೇ ಸುಬ್ರತೊ ಕಪ್ ಸಬ್ ಜೂನಿಯರ್ ಬಾಲಕರ ಅಂತರರಾಷ್ಟ್ರೀಯ ಫುಟ್‌ಬಾಲ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಎಎಸ್‌ಸಿ ಸೆಂಟರ್‌ನಲ್ಲಿ ಬುಧವಾರ ನಡೆದ ಫೈನಲ್‌ನಲ್ಲಿ 3–0 ಗೋಲಿಗಳಿಂದ ಉತ್ತರಪ್ರದೇಶದ ಮೇಜರ್ ಧ್ಯಾನಚಂದ್ ಸ್ಪೋರ್ಟ್ಸ್ ಕಾಲೇಜು ತಂಡವನ್ನು ಮಣಿಸಿತು. ಮೇಘಾಲಯ ತಂಡದ ಪದ ಪ್ರಾಸ್ಪರ್‌ವೆಲ್ ರೈಂಟಾಂಗ್ (1ನೇ ಮತ್ತು 34ನೇ ನಿಮಿಷ) ಎರಡು ಗೋಲು ಗಳಿಸಿದರೆ, ನೇಮ್‌ಬಾನ್ಲಾಮ್ ನಾಂಗ್‌ಸೆಹ್ (48ನೇ) ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು.
ಏರ್ ಮಾರ್ಷಲ್ ನಾಗೇಶ್ ಕಪೂರ್ ಅವರು ಭಾರತದ ಬ್ಯಾಡ್ಮಿಂಟನ್ ತಾರೆ ಎಚ್.ಎಸ್. ಪ್ರಣಯ್ ಮತ್ತು ಅಥ್ಲೀಟ್ ಅಶ್ವಿನಿ ಅಕ್ಕುಂಜಿ ಅವರೊಂದಿಗೆ ವಿಜೇತ ತಂಡಕ್ಕೆ ಟ್ರೋಫಿಯನ್ನು ಹಸ್ತಾಂತರಿಸಿದರು. ವಿಜೇತ ತಂಡವು ₹4 ಲಕ್ಷ ಮತ್ತು ರನ್ನರ್ ಅಪ್ ತಂಡವು ₹ 2 ಲಕ್ಷ ನಗದು ಬಹುಮಾನ ತನ್ನದಾಗಿಸಿಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.