ADVERTISEMENT

ಮಹಿಳಾ ಫುಟ್‌ಬಾಲ್‌: ಮಿಸಾಕ, ಮಾತೃ ಪ್ರತಿಷ್ಠಾನ ಜಯಭೇರಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2021, 14:39 IST
Last Updated 26 ಡಿಸೆಂಬರ್ 2021, 14:39 IST
ಚೆಂಡಿಗಾಗಿ ರೆಬೆಲ್ಸ್ ವಿಮೆನ್ಸ್ ಎಫ್‌ಸಿಯ ಸಂಸ್ಕೃತಿ ಗುರಪ್ಪ (ಎಡ) ಮತ್ತು ಪರಿಕ್ರಮ ಎಫ್‌ಸಿಯ ತನ್ವಿ ಹನ್ಸ್‌ ಸೆಣಸಾಡಿದರು –ಪ್ರಜಾವಾಣಿ ಚಿತ್ರ
ಚೆಂಡಿಗಾಗಿ ರೆಬೆಲ್ಸ್ ವಿಮೆನ್ಸ್ ಎಫ್‌ಸಿಯ ಸಂಸ್ಕೃತಿ ಗುರಪ್ಪ (ಎಡ) ಮತ್ತು ಪರಿಕ್ರಮ ಎಫ್‌ಸಿಯ ತನ್ವಿ ಹನ್ಸ್‌ ಸೆಣಸಾಡಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಿಸಾಕ ವಿಮೆನ್ಸ್ ಎಫ್‌ಸಿ ಮತ್ತು ಮಾತೃ ಪ್ರತಿಷ್ಠಾನ ಎಫ್‌ಸಿ ತಂಡಗಳು ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಮಹಿಳೆಯರ ಲೀಗ್‌ನಲ್ಲಿ ಜಯ ಗಳಿಸಿದವು.

ಬೆಂಗಳೂರು ಫುಟ್‌ಬಾಲ್ ಅಂಗಣದಲ್ಲಿ ಭಾನುವಾರ ನಡೆದ ಪಂದ್ಯಗಳಲ್ಲಿ ಬೆಂಗಳೂರು ಯುನೈಟೆಡ್‌ ಎಫ್‌ಸಿ ಮತ್ತು ಪರಿಕ್ರಮ ವಿಮೆನ್ಸ್ ಎಫ್‌ಸಿ ತಂಡಗಳು ಕೂಡ ಗೆಲುವು ಸಾಧಿಸಿದವು.

ಬೆಂಗಳೂರು ಬ್ರೇವ್ಸ್‌ ವಿರುದ್ಧದ ಪಂದ್ಯದಲ್ಲಿ ಮಿಸಾಕ 4–0ಯಿಂದ ಗೆದ್ದಿತು. ಲಾಲ್‌ರಿನ್‌ಮುನಾಯ್‌ (8ನೇ ನಿಮಿಷ) ಮತ್ತು ಲಾಲ್‌ನಿಂಗ್ ಮಾವೈ (48, 86ನೇ ನಿ) ಮಿಸಾಕ ಪರ ಗೋಲು ಗಳಿಸಿದರು. ಲಾಲುಂಗ್ವಾನಿ 44ನೇ ನಿಮಿಷದಲ್ಲಿ ಗೋಲಿನ ‘ಉಡುಗೊರೆ’ ನೀಡಿದರು.

ADVERTISEMENT

ಮಾತೃ ಪ್ರತಿಷ್ಠಾನ ಎಫ್‌ಸಿ 3–0ಯಿಂದ ಬೆಂಗಳೂರು ಸಾಕರ್ ಗ್ಯಾಲಕ್ಸಿಯನ್ನು ಸೋಲಿಸಿತು. ವರ್ಷಾ ರಾಣಿ (5ನೇ ನಿ), ನ್ಯಾನ್ಸಿ (65ನೇ ನಿ) ಮತ್ತು ಕೌಸಲ್ಯ (85ನೇ ನಿ) ಚೆಂಡನ್ನು ಗುರಿ ಮುಟ್ಟಿಸಿದರು.

ಶೋಭನ ಸೆಲ್ವಂ (82 ಮತ್ತು 86ನೇ ನಿ) ತಂದುಕೊಟ್ಟ ಗೋಲುಗಳ ಬಲದಿಂದ ಬೆಂಗಳೂರು ಯುನೈಟೆಡ್ ಎಫ್‌ಸಿ 2–0ಯಿಂದ ಸ್ಲಾಂಜರ್ಸ್ ಬೆಳಗಾಂ ತಂಡವನ್ನು ಮಣಿಸಿತು. ರೆಬೆಲ್ಸ್ ವಿಮೆನ್ಸ್ ಎಫ್‌ಸಿ 0–2ರಲ್ಲಿ ಪರಿಕ್ರಮ ವಿಮೆನ್ಸ್ ಎಫ್‌ಸಿ ಎದುರು ಸೋತಿತು. ಮೈತ್ರೇಯಿ ಪಾಲಸುಂದ್ರಂ (25ನೇ ನಿ) ಮತ್ತು ಅಂಜು (42ನೇ ನಿ) ಯಶಸ್ಸು ಕಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.