ಫುಟ್‌ಬಾಲ್
ಹಿಸೋರ್ (ತಾಜಿಕಿಸ್ತಾನ): ಭಾರತ, ಸಿಎಎಫ್‌ಎ ನೇಷನ್ಸ್ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ತನಗಿಂತ ಮೇಲಿನ ಕ್ರಮಾಂಕದ ಒಮಾನ್ ತಂಡವನ್ನು ಪೆನಾಲ್ಟಿಯಲ್ಲಿ 3–2 ಗೋಲುಗಳಿಂದ ಸೋಲಿಸಿ ಪದಾರ್ಪಣೆಯಲ್ಲಿ ಮೂರನೇ ಸ್ಥಾನ ಗಳಿಸಿತು.
ಭಾರತಕ್ಕೆ, ಪಶ್ಚಿಮ ಏಷ್ಯಾದ ರಾಷ್ಟ್ರ ಒಮಾನ್ ವಿರುದ್ಧ ಇದು ಮೊದಲ ಗೆಲುವು. ಹಿಸೋರ್ ಸೆಂಟ್ರಲ್ ಸ್ಟೇಡಿಯಂನಲ್ಲಿ ನಿಗದಿ ಅವಧಿಯ ಆಟ 1–1 ಸಮಬಲಗೊಂಡಿತ್ತು. ಒಮಾನ್ ಪರ ಜಮೀಲ್ ಅಲ್ ಯಹ್ಮದಿ 55ನೇ ನಿಮಿಷ ಗೋಲು ಗಳಿಸಿದರು. ಆದರೆ ಉದಾಂತ ಸಿಂಗ್ ಕುಮಮ್ 80ನೇ ನಿಮಿಷ ಗೋಲು ಗಳಿಸಿದ್ದರಿಂದ ಸ್ಕೋರ್ ಸಮನಾಯಿತು.
ಪೆನಾಲ್ಟಿಯಲ್ಲಿ ಲಾಲಿಯನ್ ಝುವಾಲ ಚಾಂಗ್ಟೆ, ರಾಹುಲ್ ಭೆಕೆ ಮತ್ತು ಜಿತಿನ್ ಎಂ.ಎಸ್. ತಮ್ಮ ಯತ್ನಗಳಲ್ಲಿ ಯಶಸ್ಸು ಕಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.