ADVERTISEMENT

ಒಡಿಶಾ ಎಫ್‌ಸಿ ಆಟಗಾರರ ಅಭ್ಯಾಸ ಆರಂಭ

ಪಿಟಿಐ
Published 17 ಅಕ್ಟೋಬರ್ 2020, 14:07 IST
Last Updated 17 ಅಕ್ಟೋಬರ್ 2020, 14:07 IST
ಒಡಿಶಾ ಎಫ್‌ಸಿ ಆಟಗಾರರ ಅಭ್ಯಾಸ –ಸಂಗ್ರಹ ಚಿತ್ರ
ಒಡಿಶಾ ಎಫ್‌ಸಿ ಆಟಗಾರರ ಅಭ್ಯಾಸ –ಸಂಗ್ರಹ ಚಿತ್ರ   

ಭುವನೇಶ್ವರ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಆಡುವ ಒಡಿಶಾ ಎಫ್‌ಸಿ ತಂಡದಲ್ಲಿರುವ ಭಾರತದ ಆಟಗಾರರು ಶನಿವಾರ ಗೋವಾದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ವಿದೇಶಿ ಆಟಗಾರರು ಹೋಟೆಲ್ ಕೊಠಡಿ ಸೇರಿದ್ದು ಶೀಘ್ರದಲ್ಲೇ ಅಭ್ಯಾಸಕ್ಕೆ ಇಳಿಯಲಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿಐಎಸ್‌ಎಲ್ ಆಯೋಜಕರು ಸಿದ್ಧಪಡಿಸಿರುವ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿಕೊಂಡು ಅಭ್ಯಾಸ ಆರಂಭಿಸಲಾಗಿದ್ದು ಕೋಚ್ ಸ್ಟೀವನ್ ಡಯಾಸ್ ಅವರು ತಂಡದೊಂದಿಗೆ ಇದ್ದಾರೆ. ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಮಿಂಚಿರುವ ಮಿಡ್‌ಫೀಲ್ಡ್ ಆಟಗಾರ ಡಯಾಸ್ ಅವರು ಭಾರತ ತಂಡದ ಸಹಾಯಕ ಕೋಚ್‌ ಆಗಿದ್ದರು.

‘ಫಿಟ್‌ನೆಸ್ ಕಾಯ್ದುಕೊಳ್ಳುವುದಕ್ಕಾಗಿ ಆಟಗಾರರು ಹೋಟೆಲ್ ಕೊಠಡಿಗಳಲ್ಲಿ ಭಾರಿ ಬೆವರು ಸುರಿಸಿದ್ದಾರೆ. ತಂಡದ ಸ್ಟ್ರೆಂಥ್ ಆ್ಯಂಡ್ ಕಂಡೀಷನಿಂಗ್ ಕೋಚ್ ಕಾಸನೋವಾ ಅವರು ಆಟಗಾರರ ಬಗ್ಗೆ ನಿಗಾ ವಹಿಸಿದ್ದರು’ ಎಂದು ಡಯಾಸ್ ಹೇಳಿದರು.

ADVERTISEMENT

‘ಅನೇಕ ತಿಂಗಳುಗಳ ನಂತರ ಆಟಗಾರರು ಮತ್ತು ಸಿಬಂದಿ ಕ್ರೀಡಾಂಗಣಕ್ಕೆ ಇಳಿದಿದ್ದಾರೆ. ಆದ್ದರಿಂದ ಈ ತರಬೇತಿಯು ತಂಡದ ಪ್ರತಿಯೊಬ್ಬರಿಗೂ ಮಹತ್ವದ್ದಾಗಿದೆ’ ಎಂದು ಒಡಿಶಾ ಎಫ್‌ಸಿಯ ಫುಟ್‌ಬಾಲ್ ಆಪರೇಷನ್ಸ್ ಮುಖ್ಯಸ್ಥ ಅಭಿಕ್ ಚಾಟರ್ಜಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.