ಯುನೈಟೆಡ್ ಸ್ಟಾರ್ಸ್ ಫುಟ್‌ಬಾಲ್ ಕ್ಲಬ್‌ನ ಅಬಿ ಎಸ್. (ಬಲ) ಮತ್ತು ಬೆಂಗಳೂರು ಡ್ರೀಮ್ ಯುನೈಟೆಡ್ ಎಫ್‌ಸಿ ತಂಡದ ವಿವೇಕ್ ಸಿ.ಎಸ್. ಚೆಂಡಿಗಾಗಿ ಸೆಣಸಾಟ ನಡೆಸಿದರು
–ಪ್ರಜಾವಾಣಿ ಚಿತ್ರ: ಬಿ.ಕೆ. ಜನಾರ್ದನ
ಬೆಂಗಳೂರು: ಎನ್.ರಾಕೇಶ್ ಸಿಂಗ್ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಕಿಕ್‌ಸ್ಟಾರ್ಟ್ ಎಫ್‌ಸಿ ತಂಡವು ಕೆಎಸ್‌ಎಫ್‌ಎ ಸೂಪರ್ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 4–2ರಿಂದ ಎಂಇಜಿ ಅಂಡ್ ಸೆಂಟರ್ ಎಫ್‌ಸಿ ತಂಡವನ್ನು ಮಣಿಸಿತು.
ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕಿಕ್‌ಸ್ಟಾರ್ಟ್ ಪರ ರಾಕೇಶ್ (10ನೇ, 30ನೇ ಮತ್ತು 60ನೇ) ಮತ್ತು ಮೋನಿಷ್ (58ನೇ) ಗೋಲು ಗಳಿಸಿದರು. ಎಂಇಜಿ ಪರ ಸಿದ್ಧಾಂತ್ ಪ್ರಣಯ್ (35ನೇ) ಮತ್ತು ಹೆಂಗೌಲಾಲ್ ಕಿಪ್ಗೆನ್ (43ನೇ) ಚೆಂಡನ್ನು ಗುರಿ ಸೇರಿಸಿದರು.
ಮತ್ತೊಂದು ಪಂದ್ಯದಲ್ಲಿ ಯುನೈಟೆಡ್ ಸ್ಟಾರ್ಸ್ ಎಫ್‌ಸಿ 2–0ಯಿಂದ ಬೆಂಗಳೂರು ಡ್ರೀಮ್ ಯುನೈಟೆಡ್ ಎಫ್‌ಸಿ ತಂಡವನ್ನು ಸೋಲಿಸಿದರು. ಯುನೈಟೆಡ್ ಪರ ವಿಶಾಲ್ ಆರ್. (7ನೇ) ಮತ್ತು ಎಮ್ಯಾನುಯೆಲ್ ಜೆ. ಅಡಾಲ್ಫ್ (66ನೇ)
ಇನ್ನೊಂದು ಪಂದ್ಯದಲ್ಲಿ ಬಿಎಫ್‌ಸಿ ತಂಡವು 4–1ರಿಂದ ಎಫ್‌ಸಿ ಅಗ್ನಿಪುತ್ರ ತಂಡವನ್ನು ಪರಾಭವಗೊಳಿಸಿತು. ಬಿಎಫ್‌ಸಿ ಪರ ಮೊಹಮ್ಮದ್ (35ನೇ), ಸೆರ್ಟೊ ವೋರ್ನ್‌ಮೈಲೆನ್ ಕಾಮ್ (44ನೇ), ಚಾಫಮಾಯುಂ ರೋಹೆನ್ ಸಿಂಗ್ (90+3ನೇ) ಮತ್ತು ರಾಕೇಶಿತ್ ಪಿ ಅನಿಲ್ (90+6ನೇ) ಗೋಲು ತಂದಿತ್ತರು. ಅಗ್ನಿಪುತ್ರ ಪರ ಗೌತಮ್ ರಾಜೇಶ್ (87ನೇ) ಏಕೈಕ ಗೋಲು ದಾಖಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.