ADVERTISEMENT

ಯುವೆಂಟಸ್‌ ಸೋಲು ತಪ್ಪಿಸಿದ ರೊನಾಲ್ಡೊ

ಏಜೆನ್ಸೀಸ್
Published 14 ಫೆಬ್ರುವರಿ 2020, 15:14 IST
Last Updated 14 ಫೆಬ್ರುವರಿ 2020, 15:14 IST
ಯುವೆಂಟಸ್‌ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ (ಕಪ್ಪು ಪೋಷಾಕು) ಮತ್ತು ಮಿಲಾನ್‌ ತಂಡದ ಡೇವಿಡ್‌ ಕ್ಯಾಲಬ್ರಿಯಾ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರು –ರಾಯಿಟರ್ಸ್‌ ಚಿತ್ರ
ಯುವೆಂಟಸ್‌ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ (ಕಪ್ಪು ಪೋಷಾಕು) ಮತ್ತು ಮಿಲಾನ್‌ ತಂಡದ ಡೇವಿಡ್‌ ಕ್ಯಾಲಬ್ರಿಯಾ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರು –ರಾಯಿಟರ್ಸ್‌ ಚಿತ್ರ   

ಮಿಲಾನ್‌ : ಕ್ರಿಸ್ಟಿಯಾನೊ ರೊನಾಲ್ಡೊ, ಶುಕ್ರವಾರ ಯುವೆಂಟಸ್‌ ತಂಡಕ್ಕೆ ಆಪತ್ಬಾಂಧವನಾದರು.

ಹೆಚ್ಚುವರಿ ಅವಧಿಯಲ್ಲಿ (ಇಂಜುರಿ) ರೊನಾಲ್ಡೊ ಗಳಿಸಿದ ಗೋಲಿನ ನೆರವಿನಿಂದ ಯುವೆಂಟಸ್‌ ತಂಡ ಎ.ಸಿ.ಮಿಲಾನ್‌ ವಿರುದ್ಧದ ಇಟಾಲಿಯನ್‌ ಕಪ್‌ ಮೊದಲ ಲೆಗ್‌ನ ಸೆಮಿಫೈನಲ್‌ನಲ್ಲಿ ಸೋಲಿನಿಂದ ಪಾರಾಯಿತು.

ಸ್ಯಾನ್‌ ಸಿರೊ ಕ್ರೀಡಾಂಗಣದಲ್ಲಿ ನಡೆದ ಉಭಯ ತಂಡಗಳ ನಡುವಣ ಈ ಹಣಾಹಣಿ 1–1 ಗೋಲುಗಳಿಂದ ಸಮಬಲವಾಯಿತು.

ADVERTISEMENT

ಬಲಿಷ್ಠ ಆಟಗಾರರನ್ನು ಹೊಂದಿದ್ದ ಎರಡು ತಂಡಗಳೂ ಆರಂಭದಿಂದಲೇ ಜಿದ್ದಾಜಿದ್ದಿನಿಂದ ಸೆಣಸಿದವು. ಹೀಗಾಗಿ ಮೊದಲಾರ್ಧದ ಆಟ ಗೋಲು ರಹಿತವಾಗಿತ್ತು.

ದ್ವಿತೀಯಾರ್ಧದ ಆರಂಭದಲ್ಲಿ ಮಿಲಾನ್‌ ಮೇಲುಗೈ ಸಾಧಿಸಿತು. 61ನೇ ನಿಮಿಷದಲ್ಲಿ ಈ ತಂಡದ ಆ್ಯಂಟೆ ರೆಬಿಕ್‌ ಗೋಲು ಹೊಡೆದರು. ನಿಗದಿತ ಅವಧಿಯ (90 ನಿಮಿಷ) ಆಟ ಮುಗಿದಾಗ ಮಿಲಾನ್‌ ತಂಡ 1–0 ಮುನ್ನಡೆ ಗಳಿಸಿತ್ತು.

ಹೆಚ್ಚುವರಿ ಅವಧಿಯ ಶುರುವಿನಲ್ಲೇ (90+1ನೇ ನಿಮಿಷ) ಯುವೆಂಟಸ್‌ ತಂಡಕ್ಕೆ ಪೆನಾಲ್ಟಿ ಸಿಕ್ಕಿತು. ಈ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿದ ರೊನಾಲ್ಡೊ ಸಂಭ್ರಮಿಸಿದರು. ಉಭಯ ತಂಡಗಳ ನಡುವಣ ಎರಡನೇ ಲೆಗ್‌ನ ಸೆಮಿಫೈನಲ್‌ ಪಂದ್ಯವು ಮಾರ್ಚ್‌ 5ರಂದು ಅಲಯನ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.