ಮುಟೆನ್ಜ್ (ಸ್ವಿಟ್ಜರ್ಲೆಂಡ್): ಫಿಫಾ ಮಾಜಿ ಅಧ್ಯಕ್ಷ ಸೆಪ್ ಬ್ಲಾಟರ್ ಮತ್ತು ಯುರೋಪಿಯನ್ ಫುಟ್‌ಬಾಲ್ ಸಂಸ್ಥೆ ಮಾಜಿ ಮುಖ್ಯಸ್ಥ ಮೈಕೆಲ್ ಪ್ಲಾಟಿನಿ ಅವರನ್ನು ಸ್ವಿಟ್ಜರ್ಲೆಂಡ್‌ನ ನ್ಯಾಯಾಲಯವೊಂದು ಹಣಕಾಸು ಅವ್ಯವಹಾರ, ದುರಾಡಳಿತ, ವಂಚನೆ ಆರೋಪಗಳಿಂದ ಮಂಗಳವಾರ ದೋಷಮುಕ್ತಗೊಳಿಸಿದೆ.
ಸ್ವಿಸ್ ಪ್ರಾಸಿಕ್ಯೂಟರ್‌ಗಳು ಇವರಿಬ್ಬರ ವಿರುದ್ಧ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿ ದೂರು ಸಲ್ಲಿಸಿದ್ದಾರೆ. 2011ರಲ್ಲಿ ಫಿಫಾದ ಸುಮಾರು ₹17 ಕೋಟಿ ಮೊತ್ತದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ದೂರು ಇವರಿಬ್ಬರ ಮೇಲೆ ಇದೆ. ಜೊತೆಗೆ ಫೋರ್ಜರಿ, ವಂಚನೆ ಆರೋಪಗಳೂ ಇವೆ.
ಮೂವರು ಕ್ಯಾಂಟೊನಲ್ (ಪ್ರಾಂತ) ನ್ಯಾಯಾಧೀಶರನ್ನು ಒಳಗೊಂಡಿದ್ದ ಪೀಠದ ತೀರ್ಪನ್ನು ಕೇಳಿದ ನಂತರ, 89 ವರ್ಷ ವಯಸ್ಸಿನ ಬ್ಲಾಟರ್ ಪ್ರತಿಕ್ರಿಯೆ ನೀಡಲಿಲ್ಲ. ಪ್ಲಾಟಿನಿ ಅವರು ಫ್ರಾನ್ಸ್‌ನ ಮಾಜಿ ಅಂತರರಾಷ್ಟ್ರೀಯ ಆಟಗಾರ.
ಜುಲೈ 2022ರಲ್ಲಿ ಮೊದಲ ಬಾರಿ ನ್ಯಾಯಾಲಯ ಇವರಿಬ್ಬರನ್ನು ಆರೋಪಮುಕ್ತಗೊಳಿಸಿದಾಗ, ಅದನ್ನು ಸ್ವಿಸ್ ಅಟಾರ್ನಿ ಜನರಲ್‌ಗಳು ಪ್ರಶ್ನಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.