ADVERTISEMENT

ಎಐಎಫ್‌ಎಫ್‌: ಶಾಜಿ ಪ್ರಭಾಕರನ್‌ ಪ್ರಧಾನ ಕಾರ್ಯದರ್ಶಿ

ಪಿಟಿಐ
Published 3 ಸೆಪ್ಟೆಂಬರ್ 2022, 11:22 IST
Last Updated 3 ಸೆಪ್ಟೆಂಬರ್ 2022, 11:22 IST
ಶಾಜಿ ಪ್ರಭಾಕರನ್‌
ಶಾಜಿ ಪ್ರಭಾಕರನ್‌   

ನವದೆಹಲಿ: ದೆಹಲಿ ಫುಟ್‌ಬಾಲ್ ಸಂಸ್ಥೆಯ(ಫುಟ್‌ಬಾಲ್‌ ಡೆಲ್ಲಿ) ಅಧ್ಯಕ್ಷ ಶಾಜಿ ಪ್ರಭಾಕರನ್ ಅವರು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ (ಎಐಎಫ್‌ಎಫ್‌) ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.

ಅಧ್ಯಕ್ಷ ಕಲ್ಯಾಣ್ ಚೌಬೆ ನೇತೃತ್ವದ ಎಐಎಫ್‌ಎಫ್‌ನ ನೂತನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶನಿವಾರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದೀರ್ಘಕಾಲ ಆಡಳಿತದ ಅನುಭವ ಹೊಂದಿರುವ ಶಾಜಿ ಅವರ ಆಯ್ಕೆ ನಿರೀಕ್ಷಿತವಾಗಿತ್ತು.

ಚೌಬೆ ಅವರು ಸಭೆಯಲ್ಲಿ ಶಾಜಿ ಹೆಸರು ಪ್ರಸ್ತಾಪಿಸಿದರು. ಎಲ್ಲ ಸದಸ್ಯರೂ ಅವಿರೋಧವಾಗಿ ಅನುಮೋದಿಸಿದರು ಎಂದು ಎಐಎಫ್‌ಎಫ್‌ ಹೇಳಿಕೆಯಲ್ಲಿ ತಿಳಿಸಲಾಗಿದೆ.ಶಾಜಿ ಅವರು ಫಿಫಾದ ದಕ್ಷಿಣ ಮಧ್ಯೆ ಏಷ್ಯಾದ ಅಭಿವೃದ್ಧಿ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ADVERTISEMENT

ಸುನಂಧೊ ಧಾರ್ ಅವರನ್ನು ಉಪ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಅವರು ಐ– ಲೀಗ್ ಟೂರ್ನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯೂ ಆಗಿದ್ದಾರೆ. ಐ.ಎಂ. ವಿಜಯನ್‌ ಅವರನ್ನು ತಾಂತ್ರಿಕ ಸಮಿತಿಯ ಚೇರ್ಮನ್ ಆಗಿಯೂ ಶಬ್ಬೀರ್ ಅಲಿ ಅವರನ್ನು ಸಲಹಾ ಸಮಿತಿಯ ಮುಖ್ಯಸ್ಥರನ್ನಾಗಿಯೂ ನೇಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.