ADVERTISEMENT

ಕ್ರೀಡಾಂಗಣಕ್ಕೆ ಭುಟಿಯಾ ಹೆಸರು

ಪಿಟಿಐ
Published 24 ಆಗಸ್ಟ್ 2020, 19:28 IST
Last Updated 24 ಆಗಸ್ಟ್ 2020, 19:28 IST
ಭೈಚುಂಗ್‌ ಭುಟಿಯಾ–ಪಿಟಿಐ ಚಿತ್ರ
ಭೈಚುಂಗ್‌ ಭುಟಿಯಾ–ಪಿಟಿಐ ಚಿತ್ರ   

ನವದೆಹಲಿ: ಸಿಕ್ಕಿಮ್‌ನಲ್ಲಿ 15 ಸಾವಿರ ಆಸನ ಸಾಮರ್ಥ್ಯದ, ಫ್ಲಡ್‌ಲೈಟ್‌ ವ್ಯವಸ್ಥೆಯುಳ್ಳ ಕ್ರೀಡಾಂಗಣವನ್ನು ನಿರ್ಮಿಸಲಾಗಿದ್ದು ಇದಕ್ಕೆ ಫುಟ್‌ಬಾಲ್ ದಿಗ್ಗಜ ಭೈಚುಂಗ್‌ ಭುಟಿಯಾ ಅವರ ಹೆಸರಿಡಲಾಗುತ್ತಿದೆ. ಕೋವಿಡ್‌ ಹಾವಳಿ ಕಡಿಮೆಯಾದ ಬಳಿಕ ಕ್ರೀಡಾಂಗಣದ ಉದ್ಘಾಟನೆ ನಡೆಯಲಿದೆ.

ಭುಟಿಯಾ ಅವರ ಹುಟ್ಟೂರು ಟಿಂಕ್‌ಟಾಮ್‌ನಿಂದ 25 ಕಿಲೊ ಮೀಟರ್‌ ದೂರದಲ್ಲಿ ನಾಮ್ಚಿಯಲ್ಲಿ ಈ ಕ್ರೀಡಾಂಗಣವಿದೆ.

‘ಭಾರತದ ಶ್ರೇಷ್ಠ ಫುಟ್‌ಬಾಲ್‌ ಆಟಗಾರನಿಗೆ ಇದು ನಾವು ಸಲ್ಲಿಸುವ ಗೌರವ. ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ ಹೇಳಿದ್ದರೂ ದೇಶದ ಹಲವು ‌ ಆಟಗಾರರಿಗೆ ಅವರು ಇನ್ನೂ ಆದರ್ಶ ಮತ್ತು ಪ್ರೇರಣೆಯಾಗಿದ್ದಾರೆ‘ ಎಂದು ಸಿಕ್ಕಿಂ ಫುಟ್‌ಬಾಲ್‌ ಸಂಸ್ಥೆಯ ಅಧ್ಯಕ್ಷ ಮೆನ್ಲಾ ಎಥೆನ್ಪಾ ಹೇಳಿದ್ದಾಗಿ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ತಿಳಿಸಿದೆ.

ADVERTISEMENT

ಫುಟ್‌ಬಾಲ್‌ಆಟಗಾರನೊಬ್ಬನ ಹೆಸರನ್ನು ಹೊಂದಿರುವ ಭಾರತದ ಮೊದಲ ಕ್ರೀಡಾಂಗಣ ಇದಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.